ಯೆಹೋವನಿಂದ ಕಲಿಸಲ್ಪಡುವುದು
1 ಪ್ರವಾದಿ ಯೆಶಾಯನು ಘೋಷಿಸಿದ್ದು: “ಬಳಲಿ ಹೋದವರನ್ನು ಮಾತುಗಳಿಂದ ಸುಧಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ.” (ಯೆಶಾಯ 50:4) ಯೆಹೋವನು ಇದನ್ನು ಮಾಡುವ ಒಂದು ವಿಧಾನವು ದೇವಪ್ರಭುತ್ವ ಶಾಲೆಯಿಂದ ಒದಗಿಸಲ್ಪಡುವ ತರಬೇತಿಯ ಮೂಲಕವೇ. ವೈಯಕ್ತಿಕ ಪ್ರಯತ್ನವು ಮಾತ್ರ, ಮತ್ತೂ ಬೇಕು. ಥಿಯೊಕ್ರೇಟಿಕ್ ಮಿನಿಷ್ಟ್ರಿ ಸ್ಕೂಲ್ ಗೈಡ್ ಬುಕ್ ತನ್ನ 39ನೇ ಪುಟದಲ್ಲಿ ಈ ಅವಲೋಕನೆಯನ್ನು ಮಾಡಿದೆ: “ಒಂದು ನಿರ್ದಿಷ್ಟ ತರಹದ ನೇಮಕವನ್ನು ನೀವೆಷ್ಟೇ ಸಾರಿ ಮಾಡಿರಲಿ, ತಯಾರಿಯು ಯಾವಾಗಲೂ ಮೂಲ್ಯತೆಯುಳ್ಳದ್ದು.” ಇದು ನಮ್ಮೆಲ್ಲರಿಗೆ, ಕೇವಲ ಕೆಲವೇ ತಿಂಗಳಿಂದ ನಾವು ಶಾಲೆಯಲ್ಲಿರಲಿ, ಇಲ್ಲವೇ ಶಾಲೆ ಪ್ರಾರಂಭಿಸಿದ 1943 ರಿಂದ ಇರಲಿ, ಅನ್ವಯಿಸುತ್ತದೆ.
2 ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಯಾರಿಸಬೇಕು. ಇದರಲ್ಲಿ ವೇಳೆಯ ಕಡೆಗೆ ಪ್ರಜ್ಞೆಯೂ ಸೇರಿದೆ. ಥಿಯೊಕ್ರೇಟಿಕ್ ಮಿನಿಷ್ಟ್ರಿ ಸ್ಕೂಲ್ ಶೆಡ್ಯೂಲಿನ ಸೂಚನೆಗಳು ಹೇಳುವುದು: “ಯಾವ ಭಾಷಣವಾದರೂ ವೇಳೆ ಮೀರಬಾರದು. 1ನೇ ನೇಮಕವನ್ನು ಮಾಡುವ ಸಹೋದರನು ಪದೇ ಪದೇ ವೇಳೆ ಮೀರುತ್ತಾನಾದರೆ ಅವನಿಗೆ, ಖಾಸಗೀ ಸೂಚನೆಯು ಕೊಡಲ್ಪಡಬೇಕು. ಶಾಲಾ ಮೇಲ್ವಿಚಾರಕನು ಸಹಾ ಕೂಟವನ್ನು ವೇಳೆಗೆ ಸರಿಯಾಗಿ ಆರಂಭಿಸಬೇಕು ಮತ್ತು ತನ್ನ ಸೂಚನೆ ಮತ್ತು ಹೇಳಿಕೆಗಳಿಗೆ ಮೀಸಲಾದ ಸಮಯದ ಕುರಿತು ಕೊಡಲಾದ ಸಲಹೆಯನ್ನು ಪಾಲಿಸಬೇಕು. “ಆಲ್ ಸ್ಕ್ರಿಪ್ಚರ್ಸ್”ನ 1990ರ ರಿವೈಸ್ಡ್ ಆವೃತ್ತಿಯು ದೊರೆತಾಗ ಅದನ್ನೇ ಉಪಯೋಗಿಸ ಬೇಕೆಂಬದನ್ನು ದಯವಿಟ್ಟು ಗಮನಿಸಿರಿ.
3 ಬೈಬಲಿನ ಮುಖ್ಯಾಂಶಗಳ ಭಾಗದಿಂದ ಎಲ್ಲರೂ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಇವು ನೇಮಿತ ಸಮಾಚಾರದ ಕೇವಲ ಪುನರ್ವಿಮರ್ಶೆಯಾಗಿರಬಾರದು ಎಂದು ಪುನ: ನೆನಪಿಸಲಾಗುತ್ತದೆ. ಸಮಾಚಾರವು ಏಕೆ ಮತ್ತು ಹೇಗೆ ನಮಗೆ ಮೂಲ್ಯತೆಯುಳ್ಳದ್ದು ಎಂದು ಗಣ್ಯಮಾಡಲು ಭಾಷಕನು ಸಭಿಕರಿಗೆ ಸಹಾಯ ಮಾಡಬೇಕು.
4 ಭಾಷಣ ನಂಬ್ರ 3ರ ಸಂಬಂದದಲ್ಲಿ ವಿವಿಧ ಸಾಫಲ್ಯದೊಂದಿಗೆ, ಅನೇಕ ದೃಶ್ಯಗಳು ಉಪಯೋಗಿಸಲ್ಪಟ್ಟಿವೆ. ಆದರೆ, ಸತ್ಯವನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ನೀಡುವಂತೆ ನಮಗೆ ನೆರವಾಗುವುದೇ ಶಾಲೆಯ ಒಂದು ಮುಖ್ಯ ಉದ್ದೇಶವಾದ್ದರಿಂದ, ಕ್ಷೇತ್ರಸೇವೆ ಅಥವಾ ಅನೌಪಚಾರಿಕ ಸಾಕ್ಷಿಯ ದೃಶ್ಯಗಳನ್ನು ಒಳಗೂಡಿಸುವುದು ಉತ್ತಮ.
5 ಭಾಷಣ ನಂಬ್ರ 4, ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್ ಪುಸ್ತಕದಿಂದ ತೆಗೆಯಲ್ಪಡುವಾಗ ಅದನ್ನು, ಹೊಸ ಅಥವಾ ಯುವ ಪ್ರಚಾರಕರಿಗೆ ನೇಮಿಸಬೇಕು. ನೇಮಿತ ವಿದ್ಯಾರ್ಥಿ ಓದಲು ಸಮರ್ಥನಿರಬೇಕು ನಿಶ್ಚಯ. ಈ ಭಾಷಣಗಳು ಪ್ರತೀವಾರ ರೀಸನಿಂಗ್ ಪುಸ್ತಕದ ಒಂದು ಭಾಷಣದಿಂದ ಬದಲಿಸುತ್ತವೆ. 3ನೇ ಮತ್ತು 4ನೇ ಭಾಷಣ ಎರಡರಲ್ಲೂ, ಕೊಡಲ್ಪಟ್ಟ ವಸ್ತುವಿಷಯ (ಥೀಮ್) ವನ್ನೇ ಉಪಯೋಗಿಸಬೇಕು.
6 ಹೆಚ್ಚಿನ ಸಮಾಚಾರವನ್ನು ಒಳತರುವ ವಿಷಯದಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ. ಕೆಲವು ನೇಮಿತ ವಿಷಯಗಳಲ್ಲಿ ಕೇವಲ ಒಂದೆರಡು ಪಾರಾಗಳಿರುತ್ತವೆ. ಆದರೂ, ವಚನಗಳನ್ನು ಓದಿ ವಿವರಿಸುವ ಮೂಲಕ, ದೃಷ್ಟಾಂತವೇ ಮುಂತಾದವುಗಳನ್ನು ಬಳಸುವ ಮೂಲಕ ವಿಷಯವನ್ನು, ಕೊಡಲ್ಪಟ್ಟ ಸಮಯದ ಒಳಗೇ ಪರಿಣಾಮಕಾರಿಯಾಗಿ ನೀಡಬಹುದು. ಸಾಮಾನ್ಯವಾಗಿ, ನೇಮಿತ ವಿಷಯದ ಹೊರಗಿನ ಸಮಾಚಾರವನ್ನು ನಾವು ನೀಡುವ ಅಗತ್ಯವಿರುವದಿಲ್ಲ. ಭಾಷಣವು ಆಧರಿತವಾದ ಪುಸ್ತಕದಲ್ಲಿ ನಿಮ್ಮನ್ನು ಹಿಂಬಾಲಿಸಲು ಸಭಿಕರು ಶಕ್ತರಾಗಿರಬೇಕು.
7 ನಾವು ಆರಾಧಿಸುವ ದೇವರು ವಿವೇಕ ಮತ್ತು ಜ್ಞಾನದ ಒಂದು ಅಕ್ಷಯ ಮೂಲವನ್ನು ಒದಗಿಸಿದ್ದಾನೆ. (ರೋಮಾ. 11:33) ಸಹಸ್ರ ವರ್ಷದಾಳಿಕೆಯ ನಂತರವೂ ನಮಗೆ, ಕಲಿಯಲು ತುಂಬಾ ವಿಷಯಗಳಿವೆ. ನಮ್ಮ ಸ್ವರ್ಗೀಯ ಪಿತನನ್ನು ಸ್ತುತಿಸಲು ಮತ್ತು ಜೀವಿತದ ಸಮಸ್ಯೆಗಳನ್ನು ನಿರ್ವಹಿಸಲು ನಮಗಿರುವ ಸಾಮರ್ಥ್ಯ ಹಾಗೂ ನಮ್ಮ ಸಂತುಷ್ಟಿ ಮತ್ತು ಸಂತೋಷವು, ದಿವ್ಯ ವಿವೇಕವನ್ನು ಗಳಿಸಲು ನಾವು ಪಡುವ ಪ್ರಯತ್ನದ ಪ್ರಮಾಣಕ್ಕನುಸಾರ ಹೆಚ್ಚುತ್ತಾ ಹೋಗುವುದು. ಆದ್ದರಿಂದ, ದೇವಪ್ರಭುತ್ವ ಶಾಲೆಗೆ ಕ್ರಮವಾಗಿ ಹಾಜರಾಗುವ ಮೂಲಕ ನಮ್ಮ ಮಹಾ ಶಿಕ್ಷಕನು ನಮಗೆ ಮಾಡಿರುವ ಒದಗಿಸುವಿಕೆಯಿಂದ ಪೂರ್ಣ ಪ್ರಯೋಜನ ಪಡೆಯಲು ನಿಮ್ಮ ನಿರ್ಧಾರವನ್ನು ಮಾಡಿರಿ. 1991ರ ದೇವಪ್ರಭುತ್ವ ಶಾಲೆಗಾಗಿ ತಯಾರಿಸಲು ಮತ್ತು ಭಾಗವಹಿಸಲು ನಿಮ್ಮ ಪರಿಶ್ರಮವು ಇದನ್ನು ಪೂರೈಸುವಂತೆ ನಿಮಗೆ ಸಹಾಯ ಮಾಡಲಿ.