ನಿಮ್ಮ ರಾಜ್ಯ ನಿರೀಕ್ಷೆಯಲ್ಲಿ ಪಾಲಿಗರಾಗಲು ಬ್ರೊಷರ್ಗಳನ್ನು ಮುಖ್ಯನೋಟವಾಗಿ ಇಡಿರಿ
1 ಬೈಬಲ್ ಪ್ರವಾದನೆಯ ನೆರವೇರಿಕೆಗೆ ನಾವು ಸಾಕ್ಷಿಗಳಾಗಿರುತ್ತಿರುವಾಗಲೇ, ನಮ್ಮ ರಾಜ್ಯ ನಿರೀಕ್ಷೆಯಲ್ಲಿ ನಾವು ಸಂತೋಷಿಸುತ್ತೇವೆ, ಮತ್ತು ಆಲಿಸುವ ಯಾರಿಗೂ ಅದರ ಕುರಿತು ಮಾತಾಡುವಂತೆ ನಾವು ನಡೆಸಲ್ಪಡುತ್ತೇವೆ. (ಲೂಕ 6:45; ರೋಮಾ. 12:12) ಆಗಸ್ಟ್ನಲ್ಲಿ ನಾವು ಬ್ರೊಷರ್ಗಳನ್ನು ಮುಖ್ಯನೋಟವಾಗಿ ಇಡುವುದರ ಮೂಲಕ, ಯೇಸುವು ಆಜ್ಞಾಪಿಸಿದಂತೆ ಇತರರೊಂದಿಗೆ ನಮ್ಮ ರಾಜ್ಯ ನಿರೀಕ್ಷೆಯಲ್ಲಿ ನಾವು ಪಾಲಿಗರಾಗಲು ಸಾಧ್ಯವಾಗುವಂಥ ಒಂದು ವಿಧವಾಗಿದೆ.—ಮತ್ತಾ. 24:14.
2 ಆರಿಸಲು ನಮಗೆ ಅನೇಕ ವರ್ಣಭರಿತ ಮತ್ತು ಸಮಾಚಾರಭರಿತ ಬ್ರೊಷರ್ಗಳಿರುವುದರಿಂದ, ನಮ್ಮ ಕಾರ್ಯಕ್ಷೇತ್ರದ (ಟೆರಿಟರಿಯ) ಲ್ಲಿರುವವರ ಅಗತ್ಯತೆಗಳನ್ನು ಪೂರೈಸಲು ಮತ್ತು ಅವರ ಆಸಕ್ತಿಯನ್ನು ಕೆರಳಿಸಲು ಅವುಗಳಲ್ಲಿ ಯಾವುದು ಶಕ್ಯವಾಗಿರಬಹುದು? ಬ್ರೊಷರ್ಗಳ ಅತ್ಯುತ್ತಮ ಉಪಯೋಗ ಸಾಧ್ಯವಾಗುವಷ್ಟರ ಮಟ್ಟಿಗೆ ಮಾಡಲು, ನಮಗೆ ಅವುಗಳಲ್ಲಿರುವ ವಿಷಯಗಳು ಗೊತ್ತಿರಬೇಕು. ಮುಂದಿನ ಸಂಕ್ಷಿಪ್ತ ಪರಾಮರ್ಶೆಯು ಈ ವಿಷಯದಲ್ಲಿ ನಮಗೆ ಸಹಾಯ ಮಾಡಲಿರುವುದು.
3 ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?: ಸಾಧ್ಯವಾಗುವಲ್ಲೆಲ್ಲಾ ಆಗಸ್ಟ್ನಲ್ಲಿ ನಾವು ಈ ಬ್ರೊಷರ್ನ ಉಪಯೋಗವನ್ನು ಮಾಡುವುದರ ಮೇಲೆ ನಾವು ಗಮನ ಕೇಂದ್ರೀಕರಿಸಲಿರುವೆವು. ಹಿಂದು ಹಿನ್ನೆಲೆಯಿರುವ ಜನರಿಗಾಗಿ ವಿಶೇಷವಾಗಿ ಇದು ತಯಾರಿಸಲ್ಪಟ್ಟಿದೆ ಮತ್ತು ನಮ್ಮ ಕಾರ್ಯಕ್ಷೇತ್ರಕ್ಕೆ ಆದರ್ಶಪ್ರಾಯವಾಗಿರುತ್ತದೆ. ಬೈಬಲ್ ಸಂದೇಶದೊಂದಿಗೆ ಪರಿಚಯವಿಲ್ಲದವರಿಗೆ ದೇವರ ವಾಕ್ಯದ ಕೆಲವೊಂದು ಮೂಲ ಉಪದೇಶಗಳನ್ನು ಬಹಳ ಸರಳ ರೀತಿಯಲ್ಲಿ ಪ್ರಸ್ತಾಪಿಸುತ್ತದೆ ಮತ್ತು ಅದ್ಭುತಕರವಾದ ರಾಜ್ಯ ನಿರೀಕ್ಷೆಯನ್ನು ಪಡೆಯಲು ಸಾಧ್ಯವಾಗುವಂತೆ ಇನ್ನಷ್ಟು ಅಭ್ಯಾಸಿಸಲು ಅವರನ್ನು ಉತ್ತೇಜಿಸುತ್ತದೆ.
4 ದ ಗವರ್ನ್ಮೆಂಟ್ ದ್ಯಾಟ್ ವಿಲ್ ಬ್ರಿಂಗ್ ಪ್ಯಾರಡೈಸ್: ಯೇಸುವು ಭೂಮಿಯ ಮೇಲೆ ಇದ್ದಾಗ, ಅವನ ಸಾರುವಿಕೆಯ ಮುಖ್ಯಪ್ರಸಂಗವಾಗಿ ದೇವರ ರಾಜ್ಯವು ಇತ್ತು. ರಾಜ್ಯವು ಒಂದು ನೈಜ ಸರಕಾರವೆಂದೂ, ಮತ್ತು ಇಂದು ಜೀವಿತವನ್ನು ಕಷ್ಟಕರವನ್ನಾಗಿ ಮಾಡುವ ಸಮಸ್ಯೆಗಳನ್ನು ಅದು ಹೇಗೆ ಪರಿಹರಿಸಲಿರುವುದೆಂದು ಈ ಬ್ರೊಷರ್ ತೋರಿಸುತ್ತದೆ.
5 ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!: ದೇವರು ಮನುಷ್ಯನನ್ನು ಯಾಕೆ ಉಂಟುಮಾಡಿದನು ಮತ್ತು ನಾವು ಸದಾಕಾಲ ಭೂಮಿಯ ಮೇಲೆ ಜೀವಿತದಲ್ಲಿ ಹೇಗೆ ಆನಂದಿಸಬಹುದು ಎಂದು ಇದು ವಿವರಿಸುತ್ತದೆ. ಈ ಬ್ರೊಷರ್ನಲ್ಲಿರುವ ವಿವರಣಾತ್ಮಕ ಚಿತ್ರಗಳು ಮತ್ತು ಸಂಕ್ಷಿಪ್ತ ಮೂಲಪಾಠವು ಎಳೆಯರಿಗೆ ಮತ್ತು ಮಿತ ವಾಚನ ಸಾಮರ್ಥ್ಯವಿರುವವರಿಗೆ ಆಕರ್ಷಿಸುತ್ತದೆ. ಕೇಳುವದರಲ್ಲಿ ನ್ಯೂನತೆಯಿರುವವರಿಗೂ ಬೈಬಲಿನ ಮೂಲ ಉಪದೇಶಗಳನ್ನು ಕಲಿಸಲು ಕೂಡ ಇದನ್ನು ಉಪಯೋಗಿಸಬಹುದು.
6 ದ ಡಿವೈನ್ ನೇಮ್ ದ್ಯಾಟ್ ವಿಲ್ ಎಂಡ್ಯೂರ್ ಫಾರೆವರ್: ಇದು ದೇವರ ಹೆಸರನ್ನು ಶಾಸ್ತ್ರೀಯ ಮತ್ತು ಐತಿಹಾಸಿಕ ಯಥಾದೃಷ್ಟ ರೂಪಣದಲ್ಲಿ ಚರ್ಚಿಸುತ್ತಾ, ಆ ಹೆಸರನ್ನು ಕ್ರೈಸ್ತರು ತಿಳಿಯುವುದು ಮತ್ತು ಅದನ್ನು ಅವರ ಆರಾಧನೆಯಲ್ಲಿ ಉಪಯೋಗಿಸುವುದು ಯಾಕೆ ಅತ್ಯಾವಶ್ಯಕ ಎಂದು ತೋರಿಸುತ್ತದೆ.
7 “ಇಗೋ! ಎಲ್ಲವನ್ನೂ ಹೊಸದು ಮಾಡುತ್ತೇನೆ.”: ಈ ಬ್ರೊಷರ್ ಪರದೈಸವನ್ನು ಚಿತ್ರಿಸುತ್ತದೆ ಮತ್ತು ಬೈಬಲ್ ಹಾಗೂ ನಮ್ಮ ನಿರ್ಮಾಣಿಕನೆಡೆಗೆ ಗಣ್ಯತೆಯನ್ನು ಕಟ್ಟುತ್ತದೆ. ದೇವರು ದುಷ್ಟತನವನ್ನು ಯಾಕೆ ಅನುಮತಿಸುತ್ತಾನೆ ಎಂದು ಚರ್ಚಿಸಿದ ನಂತರ, ಅದು ಬೈಬಲಿನ ಮೂರು ಮೂಲ ಬೋಧನೆಗಳಾದ ವಿಮೋಚನೆ, ಪುನರುತ್ಥಾನ ಮತ್ತು ರಾಜ್ಯದ ಮೇಲೆ ಇದು ಕೇಂದ್ರೀಕರಿಸುತ್ತದೆ. ಪುಟಗಳ ಕೊನೆಯಲ್ಲಿ ಪ್ರಶ್ನೆಗಳು ಕೂಡ ಇವೆ, ಇದರಿಂದ ಅದರಲ್ಲಿ ಒಂದು ಬೈಬಲ್ ಅಭ್ಯಾಸವನ್ನು ನಡಿಸಲು ನಮಗೆ ಸುಲಭವನ್ನಾಗಿ ಮಾಡುತ್ತದೆ.
8 ನೀವು ತ್ರಯೈಕ್ಯವನ್ನು ನಂಬಬೇಕೋ?: ತಾವು ತ್ರಯೈಕ್ಯವನ್ನು ನಂಬುತ್ತೇವೆ ಎಂದು ಜನರು ಹೇಳಬಹುದು, ಆದರೂ ಅದರ ತಿಳಿವಳಿಕೆಯ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯಗಳು ಇವೆ. ಈ ಬ್ರೊಷರ್ ಇಂಥ ಕೆಲವು ಪ್ರಶ್ನೆಗಳನ್ನು ಉತ್ತರಿಸುತ್ತದೆ: ತ್ರಯೈಕ್ಯವೆಂದರೇನು? ಬೈಬಲು ಅದನ್ನು ಕಲಿಸುತ್ತದೊ? ಯೇಸು ಕ್ರಿಸ್ತನು ಸರ್ವಶಕ್ತ ದೇವರೊ ಮತ್ತು ತ್ರಯೈಕ್ಯದ ಒಂದು ಭಾಗವೋ? ಪವಿತ್ರಾತ್ಮವೆಂದರೇನು?
9 ನಾವು ಉಪಯೋಗಿಸಲು ಬಯಸುವ ಬ್ರೊಷರ್ನ್ನು ಒಮ್ಮೆ ನಾವು ಆರಿಸಿದ ನಂತರ, ಈ ನಮ್ಮ ರಾಜ್ಯದ ಸೇವೆ ಯ ಹಿಂದಿನ ಪುಟದಲ್ಲಿರುವ ಲೇಖನಗಳನ್ನು ನಾವು ಪರಾಮರ್ಶಿಸತಕ್ಕದ್ದು. ಅಲ್ಲಿ ನಮ್ಮ ಸಾಹಿತ್ಯಗಳನ್ನು ನೀಡಲು ಮತ್ತು ಆಸಕ್ತಿಯನ್ನು ಬೆಳಸುವ ಮತ್ತು ಬೈಬಲ್ ಅಭ್ಯಾಸವೊಂದನ್ನು ಆರಂಭಿಸುವ ನೋಟದಲ್ಲಿ ಪುನಃ ಭೇಟಿಗಳನ್ನು ಮಾಡಲು ಸಲಹೆಗಳನ್ನು ನಾವು ಕಂಡುಕೊಳ್ಳುತ್ತೇವೆ.
10 ಅನೇಕ ಸಂದರ್ಭಗಳಲ್ಲಿ, ಒಂದು ಉತ್ತಮ ಸಾಕ್ಷಿಯನ್ನು ನೀಡಲು ಬೇಕಾಗಿರುವುದು ಕೇವಲ ಒಂದು ನಿರ್ದಿಷ್ಟ ಬ್ರೊಷರ್ ಮಾತ್ರ. ಆದಾಗ್ಯೂ, ನಾವು ಸಿದ್ಧರಾಗಿರಬೇಕು, ನಮ್ಮಲ್ಲಿ ಸಾಕಷ್ಟು ಬ್ರೊಷರ್ಗಳು ಇರಬೇಕು, ಅದರಲ್ಲಿ ಏನಿದೆ ಎಂದು ತಿಳಿದಿರಬೇಕು ಮತ್ತು ವಿವೇಚನೆಯುಳ್ಳವರಾಗಿರಬೇಕು. ನಮ್ಮ ಉತ್ಸಾಹಭರಿತ ಶುಶ್ರೂಷೆಯ ಮೇಲೆ ಯೆಹೋವನ ಆಶೀರ್ವಾದವು, ರಾಜ್ಯ ನಿರೀಕ್ಷೆಯಲ್ಲಿ ನಮ್ಮೊಂದಿಗೆ ಇನ್ನು ಅನೇಕರು ಆನಂದಿಸುವಂಥ ಫಲಿತಾಂಶವನ್ನು ತರಲಿ.—ಅ. ಕೃ. 13:47, 48.