ಆಸಕ್ತಿಯುಳ್ಳವರನ್ನು ಹುಡುಕಲು ಬ್ರೋಷರ್ಗಳನ್ನು ಪ್ರದರ್ಶಿಸುವುದು
1 ಬ್ರೋಷರ್ಗಳು ಶಕ್ತಿಶಾಲಿ ಉಪಕರಣಗಳಾಗಿವೆ. ಕೇವಲ 32 ಪುಟಗಳಲ್ಲಿ, ಒಂದು ಬ್ರೋಷರ್ ಶಾಸ್ತ್ರೀಯ ಸತ್ಯಗಳನ್ನು ದೃಢವಾಗಿ ಸ್ಥಾಪಿಸಬಲ್ಲದು ಮತ್ತು ದೇವರ ಜ್ಞಾನಕ್ಕೆ ವಿರುದ್ಧವಿರುವ ವಿವೇಚನೆಗಳನ್ನು ಮತ್ತು ಬೋಧನೆಗಳನ್ನು ಕೆಡವಬಲ್ಲದು.—2 ಕೊರಿ. 10:5.
2 ಜೆಹೋವಾಸ್ ವಿಟ್ನೆಸಸ್—ಯುನೈಟೆಡ್ಲಿ ಡೂಯಿಂಗ್ ಗಾಡ್ಸ್ ವಿಲ್ಲ್ ವರ್ಲ್ಡ್ವೈಡ್ ಎಂಬ ಬ್ರೋಷರನ್ನು ಓದಿದ ಅನಂತರ, “ನಾನು ಇಂಥ ಸಂಸ್ಥೆಯನ್ನು ಎಂದೂ ಕಂಡಿಲ್ಲ. . . . ಇಷ್ಟೊಂದು ಧಾರ್ಮಿಕ ಕಪಟವಿರುವ ಈ ಯುಗದಲ್ಲಿ ದೇವರ ಚಿತ್ತವನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಜನರನ್ನು ಕಾಣುವುದು ಅದ್ಭುತಕರವಾಗಿದೆ,” ಎಂದು ಬರೆಯುವಂತೆ ಮನುಷ್ಯನೊಬ್ಬನು ಪ್ರೇರಿಸಲ್ಪಟ್ಟನು. ಆಫ್ರಿಕ ದಲ್ಲಿ ಒಬ್ಬ ಮಾಂತ್ರಿಕನು ಭೂಮಿಯ ಮೇಲೆ ಸದಾಕಾಲ ಜೀವಿತವನ್ನು ಆನಂದಿಸಿರಿ! ಎಂಬ ಬ್ರೋಷರನ್ನು ಅಭ್ಯಾಸಿಸಿದನು. ಅವನ ಮೇಲೆ ಅದು ಯಾವ ಪ್ರಭಾವವನ್ನು ಬೀರಿತು? ಅವನು ತನ್ನ ಮಾಂತ್ರಿಕ ಆಚರಣೆಗಳನ್ನು ಬಿಟ್ಟುಬಿಟ್ಟನು ಮತ್ತು ತಾನು ಯಾರೊಂದಿಗೆ ಜೀವಿಸುತ್ತಿದ್ದನೋ ಆ ಹೆಂಗುಸರನ್ನು—ತನ್ನ ಹಿರಿಯ ಪತ್ನಿಯನ್ನು ಬಿಟ್ಟು—ಕಳುಹಿಸಿಬಿಟ್ಟನು. ಆಮೇಲೆ ಅವನು ಅವಳನ್ನು ನ್ಯಾಯಬದ್ಧವಾಗಿ ಮದುವೆಯಾದನು.
3 ನೀವು ತ್ರಯೈಕ್ಯವನ್ನು ನಂಬ ಬೇಕೋ? ಎಂಬ ಬ್ರೋಷರ್, ಸತ್ಯದ ಉತ್ತಮ ಪ್ರಮಾಣವನ್ನೀಯುವ, ನ್ಯಾಯವಾದ, ಮತ್ತು ಪರಿಣಾಮಕಾರಿ ಉಪಕರಣವಾಗಿದೆ. ಅದರ ಮೇಲೆ ಹೇಳಿಕೆಯನ್ನು ನೀಡುತ್ತಾ, ವೆಸ್ಟ್ ಇಂಡೀಸ್ ನ ಜಮೇಕ ದಲ್ಲಿ ದ ಸನ್ಡೇ ಗೀನ್ಲರ್ ನ ಒಬ್ಬ ಧಾರ್ಮಿಕ ಲೇಖಕನು ಹೇಳಿದ್ದು: “ಈ ಪ್ರಕಾಶನವು ಸಾಕ್ಷಿಗಳ ಅತ್ಯಂತ ಚಾತುರ್ಯದ ಹೊಡೆತವಾಗಿದೆ ಮತ್ತು ಈಗ ಯಾವುದೆ ತ್ರಿತ್ವವಾದಿ—ಯಾ ದಯ್ವವಾದಿ—ಸುರಕ್ಷಿತನಲ್ಲ. ತ್ರಿತ್ವದ ಬೋಧನೆಯು ಬೈಬಲಿಂದ ಬಂದಿಲ್ಲವೆಂದು ತೋರಿಸಲು ಪುಸ್ತಿಕೆಯು ಐತಿಹಾಸಿಕ ಮತ್ತು ದೇವಶಾಸ್ತ್ರದ ಮೂಲಗಳಿಂದ ಉದ್ಧರಣದ ಮೇಲೆ ಉದ್ಧರಣವನ್ನು ಒಟ್ಟು ಹಾಕುತ್ತದೆ. . . . ಒಬ್ಬ ಸಾಮಾನ್ಯನು—ಅಥವಾ ಸಾಮಾನ್ಯನಿಗಿಂತಲೂ ಹೆಚ್ಚಾಗಿರುವ ಚರ್ಚಿನ ಸದಸ್ಯನು—ಯೇಸು ದೇವರು ಎಂಬ ನೋಟದ ವಿರುದ್ಧ ಸಾಕ್ಷಿಗಳ ಮೂಲಕ ಹಾಕಲಾದ ಗಮನ ಸೆಳೆಯುವ ಮತ್ತು ಉನ್ನತ ವಾದಗಳನ್ನು ಹೇಗೆ ಉತ್ತರಿಸಬಲ್ಲನೆಂದು ನೋಡಲು ಈ ಧಾರ್ಮಿಕ ಲೇಖಕನಿಗೆ ಬಹಳ ಕಠಿನವಾಗಿದೆ.”
4 ಅವುಗಳನ್ನು ಉತ್ತಮವಾಗಿ ಉಪಯೋಗಿಸಿರಿ: ಪರಿಣಾಮಕಾರಿಯಾಗಿರಲು, ಈ ಆಕರ್ಷಕ ಹಾಗೂ ಅಧಿಕೃತ ಉಪಕರಣಗಳು, ಅವುಗಳನ್ನು ಓದುವ ಜನರಿಗೆ ನೀಡಲ್ಪಡತಕ್ಕದ್ದು. ಭಿನ್ನವಾದ ಮುಖ್ಯ ವಿಷಯದೊಂದಿಗೆ ವ್ಯವಹರಿಸುವ ಹಲವಾರು ಬ್ರೋಷರ್ಗಳು ನಮ್ಮಲ್ಲಿ ಇರುವುದರಿಂದ, ನಾವು ಸಾಕ್ಷಿ ನೀಡುತ್ತಿರುವ ವ್ಯಕ್ತಿಗೆ ಬಹಳ ಸೂಕ್ತವಾಗಿದೆ ಎಂದು ತೀರ್ಮಾನಿಸುವುದನ್ನು ನೀಡಲು ನಾವು ಪ್ರಯತ್ನಿಸಬೇಕು. ನಮ್ಮ ಬ್ರೋಷರ್ಗಳನ್ನು ತಿಳಿಯುವುದು ಮತ್ತು ವಿವಿಧ ಬ್ರೋಷರ್ಗಳನ್ನು ಇಟ್ಟುಕೊಂಡಿರುವುದು, ಕ್ಷೇತ್ರ ಸೇವೆಯಲ್ಲಾಗಲಿ, ಮನೆಯಲ್ಲಾಗಲಿ, ಇತರ ಕಡೆಗಳಲ್ಲಾಗಲಿ ಅವುಗಳನ್ನು ಉತ್ತಮವಾಗಿ ಉಪಯೋಗಿಸಲು ನಮಗೆ ಸುಲಭ ಮಾಡುವುದು.
5 ಉದಾಹರಣೆಗೆ, ಜೀವನದಲ್ಲಿ ತಾನು ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಮನಗುಂದಿದ ಯಾ ಭವಿಷ್ಯಕ್ಕಾಗಿ ಅಲ್ಪ ನಿರೀಕ್ಷೆಯನ್ನು ವ್ಯಕ್ತಪಡಿಸುವ ವ್ಯಕ್ತಿಯೊಡನೆ ಮಾತಾಡುತ್ತಿರುವುದಾದರೆ, ನೀವು ಯಾವ ಬ್ರೋಷರನ್ನು ಉಪಯೋಗಿಸುವಿರಿ? ಪ್ರೀತಿಸುವ ಒಬ್ಬ ದೇವರು ಇಷ್ಟೊಂದು ಕಷ್ಟಾನುಭವವನ್ನು ಯಾಕೆ ಅನುಮತಿಸಿದ್ದಾನೆಂದು ಯಾರಾದರೂ ಪ್ರಶ್ನಿಸುವುದಾದರೆ, ಯಾವ ಬ್ರೋಷರ್ ಆ ಅಗತ್ಯವನ್ನು ಪೂರೈಸುವುದು? ಜನರಿಗೆ ಪ್ರಯೋಜನ ತರುವ ಒಂದು ಸರಕಾರದ ಅಗತ್ಯದ ಕುರಿತು ಕಳವಳವನ್ನು ವ್ಯಕ್ತಿಯೊಬ್ಬನು ವ್ಯಕ್ತಪಡಿಸುವುದಾದರೆ, ಅವನಿಗೆ ಸರಿಯಾದ ಬ್ರೋಷರ್ ಯಾವುದಾಗಿರಬಹುದು?
6 ಯಾವ ಬ್ರೋಷರನ್ನು ಉಪಯೋಗಿಸಬೇಕು ಎಂಬುದನ್ನು ತಿಳಿದಿರುವುದರ ಜೊತೆಗೆ, ಅದರ ಒಳವಿಷಯದ ಕುರಿತು ವ್ಯಕ್ತಿಯ ಹಸಿವನ್ನು ಕೆರಳಿಸಲು ಪ್ರಯತ್ನಿಸಿರಿ. ಪರಿಸ್ಥಿತಿಗಳು ಅನುಮತಿಸುವುದಾದರೆ, ವಿಷಯವನ್ನು ಓದುವಂತೆ ಅವನ ಆಸಕ್ತಿಯನ್ನು ಪ್ರಚೋದಿಸುವ ಒಂದು ಹೇಳಿಕೆಯನ್ನು ಯಾ ದೃಷ್ಟಾಂತವನ್ನು ಸೂಚಿಸಿರಿ. ಅಥವಾ ನೀವು ಅವನೊಂದಿಗೆ ಒಂದು ಯಾ ಎರಡು ಪ್ಯಾರಗ್ರಾಫ್ಗಳನ್ನು ಓದಿ, ಉದಾಹರಿಸಿದ ವಚನಗಳನ್ನು ತೆಗೆದು ನೋಡಿ, ಮತ್ತು ವಿಷಯವನ್ನು ಚರ್ಚಿಸ ಸಾಧ್ಯವಿದೆ. ಅನೇಕ ಉತ್ತಮವಾದ ಬೈಬಲ್ ಅಭ್ಯಾಸಗಳು ಈ ರೀತಿಯಲ್ಲಿ ಆರಂಭಗೊಂಡಿವೆ.
7 ನಮ್ಮ ಬ್ರೋಷರ್ಗಳು ಶಾಸ್ತ್ರೀಯವಾದ ಉತ್ತರಗಳನ್ನು ಒದಗಿಸುತ್ತವೆ ಮತ್ತು ಲೋಕದಲ್ಲಿ ಮಾಡಲಾಗುತ್ತಿರುವ ಅಸಹ್ಯಕರವಾದ ವಿಷಯಗಳ ಸಂಬಂಧದಲ್ಲಿ ನರಳಿ ಗೋಳಾಡುವವರಲ್ಲಿ ನಿರೀಕ್ಷೆಯನ್ನು ತುಂಬುತ್ತವೆ. (ಯೆಹೆಜ್ಕೇಲ 9:4 ಹೋಲಿಸಿ.) ಇಂಥ ಸಾಹಿತ್ಯದಲ್ಲಿರುವ ಸಂದೇಶಕ್ಕೆ ಕುರಿಗಳಂತಹ ಜನರು ಪ್ರತಿಕ್ರಿಯಿಸುವರು. ಆಸಕ್ತಿಯುಳ್ಳವರನ್ನು ಹುಡುಕುವಾಗ, ನಮ್ಮ ಶುಶ್ರೂಷೆಯ ಎಲ್ಲ ವಿಧಾನಗಳಲ್ಲಿ, ಬ್ರೋಷರ್ಗಳ ಸದುಪಯೋಗ ಮಾಡುವುದು ನಮ್ಮ ಸುಯೋಗವಾಗಿದೆ.