ಜುಲೈಯಲ್ಲಿ ಬ್ರೋಷರ್ಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು
1 ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ತೀವ್ರಗೊಳಿಸಲು, ಸಂಸ್ಥೆಯು ಉದಾರವಾಗಿ ಅನೇಕ ವಿಭಿನ್ನ ಪ್ರಕಾಶನಗಳನ್ನು ಸರಬರಾಯಿ ಮಾಡಿದೆ. ಭೂಮಿಗಾಗಿ ದೇವರ ಉದ್ದೇಶ, ತ್ರಿತ್ವ, ದೇವರ ನಾಮ, ರಾಜ್ಯ ಸರಕಾರ, ಮತ್ತು ದುಷ್ಟತನಕ್ಕೆ ದೇವರ ಅನುಮತಿಯಂಥ ನಿರ್ದಿಷ್ಟ ಮುಖ್ಯ ವಿಷಯಗಳೊಂದಿಗೆ ನಿರ್ವಹಿಸುವ ಬ್ರೋಷರ್ಗಳು ಇವುಗಳಲ್ಲಿ ಒಂದಾಗಿವೆ. ನಮ್ಮ ಟೆರಿಟೊರಿಯಲ್ಲಿನ ಜನರಿಗೆ ಸಹಾಯ ಮಾಡಲು ನಾವು ಬ್ರೋಷರ್ಗಳನ್ನು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಬಹುದು?
2 ಕಷ್ಟಾನುಭವರಹಿತ ಒಂದು ಹೊಸ ಲೋಕವು ಹತ್ತಿರವಿದೆಯೆಂದು ನಮ್ಮ ಸಮಸ್ಯೆಗಳು—ಅವುಗಳನ್ನು ಬಗೆಹರಿಸಲು ಯಾರು ನಮಗೆ ಸಹಾಯ ಮಾಡುವರು? ಎಂಬ ಬ್ರೋಷರ್ ವಿವರಿಸುತ್ತದೆ. ನಾವು ಅದನ್ನು ಹೇಗೆ ಪರಿಚಯಿಸಬಹುದು? ರೀಸನಿಂಗ್ ಪುಸ್ತಕದಲ್ಲಿ ಪುಟ 393 ರಿಂದ ಆರಂಭಿಸಿ “ಸಫರಿಂಗ್” ಎಂಬ ಮುಖ್ಯ ತಲೆಬರಹದ ಕೆಳಗೆ ಸೂಚನೆಗಳನ್ನು ಕಾಣಬಹುದು, ಯಾ ಪುಟ 12 ರಲ್ಲಿ “ಇನ್ಜಸ್ಟಿಸ್⁄ಸಫರಿಂಗ್” ಎಂಬ ತಲೆಬರಹದ ಕೆಳಗೆ ಇರುವ ಪೀಠಿಕೆಯನ್ನು ನೀವು ಇಷ್ಟಪಡಬಹುದು.
3 ನೀವು ಹೀಗೆ ಹೇಳಬಹುದು:
▪ “ಮಾನವರು ಸಮಸ್ಯೆಗಳನ್ನು ಮತ್ತು ಕಷ್ಟಾನುಭವಗಳನ್ನು ಎದುರಿಸುತ್ತಾರೆಂಬ ವಿಷಯದಲ್ಲಿ ದೇವರು ನಿಜವಾಗಿಯೂ ಲಕ್ಷಿಸುತ್ತಾನೊ ಎಂದು ನೀವು ಎಂದಾದರೂ ಕುತೂಹಲಪಟ್ಟಿದ್ದುಂಟೊ?” ಉತ್ತರಕ್ಕೆ ಸಮಯ ಕೊಡಿರಿ. ಕೀರ್ತನೆ 72:12-14 ಓದಿರಿ. ನಮ್ಮ ಸಮಸ್ಯೆಗಳು—ಅವುಗಳನ್ನು ಬಗೆಹರಿಸಲು ಯಾರು ನಮಗೆ ಸಹಾಯ ಮಾಡುವರು? ಎಂಬ ಬ್ರೋಷರನ್ನು ಪುಟ 8 ಕ್ಕೆ ತಿರುಗಿಸಿರಿ ಮತ್ತು ಆ ಪುಟದಲ್ಲಿರುವ ದಪ್ಪ ತಲೆಬರಹದ ಕೆಳಗೆ ಇರುವ ಅಂಶಗಳನ್ನು ಅಷ್ಟೇ ಅಲ್ಲದೆ ಪುಟ 18 ರಲ್ಲಿ ತಿಳಿಸಲಾದ ಭವಿಷ್ಯಕ್ಕಾಗಿ ಇರುವ ನಮ್ಮ ನಿರೀಕ್ಷೆಯನ್ನು ಚರ್ಚಿಸಿರಿ. ಬ್ರೋಷರ್ ನಿರಾಕರಿಸಲ್ಪಟ್ಟಲ್ಲಿ, ಕಂಫರ್ಟ್ ಫಾರ್ ದ ಡಿಪ್ರೆಸ್ಡ್ ಯಾ ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ದಂಥ ಕಿರುಹೊತ್ತಗೆಯನ್ನು ಯಾಕೆ ನೀಡಬಾರದು?
4 ಇಂದು ಉತ್ತಮ ಸರಕಾರವು ಚಿಂತನೆಯ ಒಂದು ವಿಷಯವಾಗಿದೆ. ಮಾನವನ ಆಳಿಕೆಯು ಲೋಕವನ್ನು ಐಕ್ಯಗೊಳಿಸುವದೊ ಎಂದು ಅನೇಕರು ಆಶ್ಚರ್ಯಪಡುತ್ತಾರೆ. ರೀಸನಿಂಗ್ ಪುಸ್ತಕದ ಪುಟ 152 ರಿಂದ ಆರಂಭಗೊಳ್ಳುವ, “ಗವರ್ನ್ಮೆಂಟ್” ಕೆಳಗೆ ಸಹಾಯಕಾರಿ ಮಾಹಿತಿಯು ದೊರೆಯುತ್ತದೆ.
5 ನೀವು ಹೀಗೆ ಕೇಳಬಹುದು:
▪ “ಬಾಳುವ ಸಂತೋಷವನ್ನು ನಿಜವಾಗಿಯೂ ತರುವ ಒಂದು ಸರಕಾರವನ್ನು ಸ್ಥಾಪಿಸುವುದು ಮಾನವರಿಗೆ ಸಾಧ್ಯವೊ?” ಉತ್ತರಕ್ಕಾಗಿ ಅನುಮತಿಸಿ, ಆಮೇಲೆ ಕೇಳಿ: “ಮಾನವ ಇತಿಹಾಸದ ದಾಖಲೆಯು ಏನನ್ನು ತೋರಿಸುತ್ತದೆ?” ಯೆರೆಮೀಯ 10:23 ಕ್ಕೆ ತಿರುಗಿರಿ, ಯಾ ರೀಸನಿಂಗ್ ಪುಸ್ತಕದ ಪುಟ 152 ಕ್ಕೆ ತಿರುಗಿಸಿರಿ ಮತ್ತು ಸೂಕ್ತವಾದ ವಚನಗಳನ್ನು ಮತ್ತು ಹೇಳಿಕೆಗಳನ್ನು ಓದಿರಿ. ಆಮೇಲೆ, ಗವರ್ನ್ಮೆಂಟ್ ಬ್ರೋಷರ್ನಲ್ಲಿ ಪುಟಗಳು 24 ಮತ್ತು 25 ಕ್ಕೆ ತಿರುಗಿಸಿರಿ ಮತ್ತು ದೃಷ್ಟಾಂತಗಳನ್ನು ಮತ್ತು ವಚನಗಳನ್ನು ಪರಿಗಣಿಸಿರಿ. ದೇವರ ಸರಕಾರವು ಜನರನ್ನು ಭೌಗೋಲಿಕವಾಗಿ ಹೇಗೆ ಐಕ್ಯಗೊಳಿಸುವದೆಂದು ವಿವರಿಸಿರಿ. ಮನೆಯವನು ಬ್ರೋಷರನ್ನು ಸ್ವೀಕರಿಸದಿದ್ದರೆ, ವಿಲ್ ದಿಸ್ ವರ್ಲ್ಡ್ ಸರ್ವೈವ್? ಎಂಬ ಕಿರುಹೊತ್ತಗೆಯನ್ನು ನೀವು ನೀಡಬಹುದು.
6 ನಿಮ್ಮ ನೆರೆಹೊರೆಯಲ್ಲಿ ಪಾತಕದ ಭಯವಿದ್ದರೆ, ಮುಂದಿನ ಪಿಠೀಕೆ ಹಿತವಾಗಿರಬಹುದು.
7 ನೀವು ಹೀಗೆ ಹೇಳಬಹುದು:
▪ “‘ದೇವರು ಪ್ರೀತಿಯಾಗಿದ್ದರೆ, ದುಷ್ಟತನವನ್ನು ಆತನು ಅನುಮತಿಸುವುದೇಕೆ?’ ಎಂದು ಅನೇಕ ಜನರು ವಿಸ್ಮಯಗೊಳ್ಳುತ್ತಾರೆ. ನೀವು ಕೂಡ ಇದರ ಬಗ್ಗೆ ಯೋಚಿಸಿದ್ದೀರೊ?” ಹೇಳಿಕೆಗಾಗಿ ಅನುಮತಿಸಿ, ಅನಂತರ ಹೇಳಿ: “ಜನರು ಮಾಡುವ ಕೆಟ್ಟ ವಿಷಯಗಳಿಗಾಗಿ ದೇವರನ್ನು ದೂಷಿಸುವುದರ ವಿರುದ್ಧ ಜ್ಞಾನೋಕ್ತಿ 19:3 ಎಚ್ಚರಿಸುತ್ತದೆ ಎಂದು ಗಮನಿಸಿರಿ.” ವಚನವನ್ನು ಓದಿದ ಅನಂತರ, “ಇಗೋ! ನಾನು ಎಲ್ಲವನ್ನು ಹೊಸದು ಮಾಡುತ್ತೇನೆ” ಎಂಬ ಬ್ರೋಷರ್ನ ಪುಟ 15 ಕ್ಕೆ ಗಮನವನ್ನು ಮಾರ್ಗದರ್ಶಿಸಿರಿ ಮತ್ತು 27 ನೆಯ ಪ್ಯಾರಗ್ರಾಫನ್ನು ಓದಿರಿ. ಇದು ಮುಂದಿನ ಪ್ಯಾರಗ್ರಾಫ್ಗಳ ಚರ್ಚೆಗೆ ನಡೆಸಬಲ್ಲದು.
8 ಕುರಿಗಳಂಥ ಜನರಿಗೆ ಸುಸಮಾಚಾರದ ಬಗ್ಗೆ ಕಲಿಸಲು ಬ್ರೋಷರ್ಗಳನ್ನು ಉಪಯೋಗಿಸುವುದು ನಾವೆಲ್ಲರೂ ಮಾಡಬಲ್ಲ ಸಂಗತಿಯಾಗಿದೆ. ದೇವರ ಸಂಸ್ಥೆಯೊಂದಿಗೆ ಸಹವಾಸ ಮಾಡಲು ಜೀವನದ ಎಲ್ಲ ಮಾರ್ಗಗಳಿಂದ ಬರುವ ಜನರಿಗೆ ನಾವು ಸಹಾಯ ಮಾಡಬಲ್ಲೆವು. ನಮ್ಮ ಸಮಯೋಚಿತವಾದ ಬ್ರೋಷರ್ಗಳನ್ನು ನಾವು ಪರಿಣಾಮಕಾರಿಯಾಗಿ ಉಪಯೋಗಿಸಿದ ಹಾಗೆ ಸಾರುವ ಚಟುವಟಿಕೆಯಲ್ಲಿ ಭಾಗವಹಿಸುವುದು ನಮ್ಮ ಸುಯೋಗವಾಗಿದೆ.