ಸ್ನೇಹಭಾವದ ಸಂಭಾಷಣೆಗಳು ಹೃದಯವನ್ನು ತಲಪಬಲ್ಲವು
1 ಸಂಭಾಷಣೆಯನ್ನು “ವಿಚಾರಗಳ ಮೌಖಿಕ ವಿನಿಮಯ”ದೋಪಾದಿ ವಿಶದೀಕರಿಸಸಾಧ್ಯವಿದೆ. ಇತರರಿಗೆ ಸಂಬಂಧಿಸುವ ಒಂದು ವಿಷಯದ ಮೇಲೆ ಸ್ನೇಹಭಾವದ ಸಂಭಾಷಣೆಗಳನ್ನು ಆರಂಭಿಸುವುದು, ಅವರ ಆಸಕ್ತಿಯನ್ನು ಸೆರೆಹಿಡಿಯಬಹುದು ಮತ್ತು ರಾಜ್ಯ ಸಂದೇಶದೊಂದಿಗೆ ಅವರ ಹೃದಯಗಳನ್ನು ತಲಪುವುದರಲ್ಲಿ ನಮಗೆ ನೆರವು ನೀಡಬಲ್ಲದು. ಜನರನ್ನು ಒಂದು ಸ್ನೇಹಭಾವದ ಹಾಗೂ ಆರಾಮ ರೀತಿಯ ಸಂಭಾಷಣೆಯಲ್ಲಿ ತೊಡಗಿಸುವುದು, ಅವರಿಗೆ ಒಂದು ಪ್ರಸಂಗವನ್ನು ನೀಡುವುದಕ್ಕಿಂತ ಅತಿಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಅನುಭವವು ತೋರಿಸಿದೆ.
2 ಒಂದು ಸ್ನೇಹಭಾವದ ಸಂಭಾಷಣೆಯನ್ನು ಆರಂಭಿಸುವ ವಿಧ: ಇತರರೊಂದಿಗೆ ನಾವು ಸಂಭಾಷಿಸಶಕ್ತರಾಗಬೇಕೆಂಬ ವಿಷಯವು, ನಾವು ಆಲೋಚನೆಗಳ ಹಾಗೂ ಶಾಸ್ತ್ರವಚನಗಳ ಯಾವುದೊ ಎದ್ದುಕಾಣುವ ಕ್ರಮವನ್ನು ಸಾದರಪಡಿಸಬೇಕೆಂಬುದನ್ನು ಅರ್ಥೈಸುವುದಿಲ್ಲ. ಅದು ಕೇವಲ ಎದುರಿನಲ್ಲಿರುವ ವ್ಯಕ್ತಿಯು ನಮ್ಮೊಂದಿಗೆ ಮಾತಾಡುವಂತೆ ಮಾಡುವುದನ್ನು ಒಳಗೊಳ್ಳುತ್ತದೆ. ಉದಾಹರಣೆಗೆ, ನಮ್ಮ ಪಕ್ಕದ ಮನೆಯ ನೆರೆಯವನೊಂದಿಗೆ ನಾವು ಒಂದು ಸ್ನೇಹಭಾವದ ಸಂಭಾಷಣೆಯನ್ನು ಮಾಡುವಾಗ, ಅದು ಅನಮ್ಯವಾಗಿರುವುದಿಲ್ಲ, ಬದಲಿಗೆ ಆರಾಮ ರೀತಿಯದ್ದಾಗಿರುತ್ತದೆ. ನಾವು ನಮ್ಮ ಮುಂದಿನ ಮಾತುಗಳ ಕುರಿತು ಆಲೋಚಿಸುತ್ತಿಲ್ಲ, ಬದಲಿಗೆ ಅವನು ವ್ಯಕ್ತಪಡಿಸುವ ವಿಚಾರಗಳಿಗೆ ಸ್ವಾಭಾವಿಕವಾಗಿ ಪ್ರತಿಕ್ರಿಯಿಸುತ್ತಿದ್ದೇವೆ. ಅವನು ಹೇಳುವ ವಿಷಯದಲ್ಲಿ ಯಥಾರ್ಥವಾದ ಆಸಕ್ತಿಯನ್ನು ತೋರಿಸುವುದು, ನಮ್ಮೊಂದಿಗೆ ಸಂಭಾಷಿಸುವುದನ್ನು ಮುಂದುವರಿಸುವಂತೆ ಅವನನ್ನು ಉತ್ತೇಜಿಸಬಹುದು. ಇತರರಿಗೆ ಸಾಕ್ಷಿನೀಡುವಾಗಲೂ ಇದು ಸತ್ಯವಾಗಿರಬೇಕು.
3 ಅಪರಾಧ, ಯುವ ಜನರ ಸಮಸ್ಯೆಗಳು, ಸ್ಥಳಿಕ ವಿವಾದಾಂಶಗಳು, ಲೋಕ ಪರಿಸ್ಥಿತಿಗಳು, ಅಥವಾ ಹವಾಮಾನದಂತಹ ವಿಷಯಗಳನ್ನೂ, ಸ್ನೇಹಭಾವದ ಸಂಭಾಷಣೆಗಳನ್ನು ಆರಂಭಿಸಲು ಉಪಯೋಗಿಸಸಾಧ್ಯವಿದೆ. ಜನರ ಜೀವಿತಗಳನ್ನು ನೇರವಾಗಿ ಬಾಧಿಸುವ ವಿಷಯಗಳು, ಅವರ ಆಸಕ್ತಿಯನ್ನು ಕೆರಳಿಸುವುದರಲ್ಲಿ ಬಹಳ ಪರಿಣಾಮಕಾರಿಯಾಗಿವೆ. ಸಂಭಾಷಣೆಯೊಂದು ಒಮ್ಮೆ ಆರಂಭಿಸಲ್ಪಟ್ಟ ತರುವಾಯ, ನಾವು ಅದನ್ನು ರಾಜ್ಯ ಸಂದೇಶದ ಕಡೆಗೆ ನಯವಾಗಿ ತಿರುಗಿಸಬಲ್ಲೆವು.
4 ಒಂದು ಆರಾಮ ರೀತಿಯ ಸಂಭಾಷಣೆಯನ್ನು ಮಾಡುವುದು, ಮುಂಚಿತವಾದ ತಯಾರಿಯು ಅಗತ್ಯವಿಲ್ಲವೆಂಬುದನ್ನು ಅರ್ಥೈಸುವುದಿಲ್ಲ. ಮುಂಚಿತವಾದ ತಯಾರಿಯು ಅಗತ್ಯವಾಗಿದೆ. ಹಾಗಿದ್ದರೂ, ಒಂದು ಅನಮ್ಯ ಹೊರಮೇರೆಯನ್ನು ಸೂತ್ರೀಕರಿಸುವ ಅಥವಾ ಒಂದು ಪ್ರಸಂಗವನ್ನು ಕಂಠಪಾಠಮಾಡುವ ಅಗತ್ಯವಿರುವುದಿಲ್ಲ, ಇದು ಸದ್ಯದ ಪರಿಸ್ಥಿತಿಗಳಿಗೆ ಬಗ್ಗದ ಅಥವಾ ಹೊಂದಿಕೊಳ್ಳಲಾರದ ಒಂದು ಸಂಭಾಷಣೆಯಲ್ಲಿ ಪರಿಣಮಿಸುವುದು. (ಹೋಲಿಸಿ 1 ಕೊರಿಂಥ 9:20-23.) ತಯಾರಿಸುವ ಒಂದು ಅತ್ಯುತ್ತಮ ವಿಧವು, ಅವುಗಳ ಸುತ್ತಲೂ ಸಂಭಾಷಣೆಗಳನ್ನು ಕಟ್ಟುವ ದೃಷ್ಟಿಕೋನದಿಂದ ಒಂದೆರಡು ಶಾಸ್ತ್ರೀಯ ಮುಖ್ಯವಿಷಯಗಳನ್ನು ಆರಿಸುವುದಾಗಿದೆ. ರೀಸನಿಂಗ್ ಪುಸ್ತಕದಲ್ಲಿ ಕಂಡುಕೊಳ್ಳಲ್ಪಡುವ ವಿಷಯಗಳನ್ನು ಪುನರ್ವಿಮರ್ಶಿಸುವುದು, ಇದಕ್ಕೆ ಸಹಾಯಕಾರಿಯಾಗಿ ಪರಿಣಮಿಸುವುದು.
5 ಒಂದು ಸ್ನೇಹಭಾವದ ಸಂಭಾಷಣೆಗಾಗಿರುವ ಅತ್ಯಾವಶ್ಯಕ ಗುಣಗಳು: ನಾವು ಇತರರೊಂದಿಗೆ ಸಂಭಾಷಿಸುವಾಗ, ನಾವು ಹೃತ್ಪೂರ್ವಕರೂ ಪ್ರಾಮಾಣಿಕರೂ ಆಗಿರತಕ್ಕದ್ದು. ಈ ಗುಣಗಳನ್ನು ಪ್ರತಿಬಿಂಬಿಸಲು, ಒಂದು ಮುಗುಳುನಗೆ ಹಾಗೂ ಉಲ್ಲಾಸಕರ ತೋರಿಕೆಯು ಸಹಾಯ ಮಾಡುತ್ತದೆ. ನಮ್ಮಲ್ಲಿ ಲೋಕದಲ್ಲಿ ಅತಿ ಉತ್ತಮವಾಗಿರುವ ಸಂದೇಶವು ಇದೆ; ಅದು ಪ್ರಾಮಾಣಿಕ ಹೃದಯದ ಜನರಿಗೆ ಅತಿ ಹೆಚ್ಚು ಆಕರ್ಷಕವಾಗಿದೆ. ಅವರಲ್ಲಿರುವ ನಮ್ಮ ಆಸಕ್ತಿಯು, ಅವರೊಂದಿಗೆ ಯಾವುದೊ ಸುವಾರ್ತೆಯನ್ನು ಹಂಚಿಕೊಳ್ಳುವ ಒಂದು ಪ್ರಾಮಾಣಿಕ ಬಯಕೆಯಿಂದ ಪ್ರಚೋದಿಸಲ್ಪಟ್ಟಿದೆ ಎಂಬುದಾಗಿ ಅವರಿಗೆ ಅನಿಸುವಲ್ಲಿ, ಆಗ ಅವರು ಕಿವಿಗೊಡಲು ಪ್ರೇರಿಸಲ್ಪಡಬಹುದು.—2 ಕೊರಿಂ. 2:17.
6 ಸಂಭಾಷಣೆಯಲ್ಲಿ ತೊಡಗುವುದು ಒಂದು ಸಂತೋಷಕರ ಅನುಭವವಾಗಿರತಕ್ಕದ್ದು. ಆದುದರಿಂದ, ರಾಜ್ಯ ಸಂದೇಶವನ್ನು ಸಾದರಪಡಿಸುವುದರಲ್ಲಿ ನಾವು ದಯಾಪರರೂ ನೈಪುಣ್ಯರೂ ಆಗಿರತಕ್ಕದ್ದು. (ಗಲಾ. 5:22; ಕೊಲೊ. 4:6) ಎದುರಿನಲ್ಲಿರುವ ವ್ಯಕ್ತಿಯಲ್ಲಿ ಯೆಹೋವನ ಸಾಕ್ಷಿಗಳ ಕುರಿತು ಒಂದು ಅನುಕೂಲಕರ ಅಭಿಪ್ರಾಯ ಮೂಡಿಸಲು ಶ್ರಮಿಸಿರಿ. ಈ ವಿಧದಲ್ಲಿ, ಅವನ ಹೃದಯವನ್ನು ತಲಪುವುದರಲ್ಲಿ ನಾವು ಆರಂಭದಲ್ಲಿ ಅಸಫಲರಾಗಿರುವುದಾದರೂ, ಮುಂದಿನ ಸಮಯ ಒಬ್ಬ ಸಾಕ್ಷಿಯು ಅವನೊಂದಿಗೆ ಸಂಭಾಷಿಸುವಾಗ ಅವನು ಬೇಗ ಗ್ರಹಿಸುವವನಾಗಿರಬಹುದು.
7 ಒಂದು ಸ್ನೇಹಭಾವದ ಸಂಭಾಷಣೆಯನ್ನು ಆರಂಭಿಸುವುದು, ಒಂದು ಜಟಿಲವಾದ ಪ್ರಸಂಗದಲ್ಲಿ ನೈಪುಣ್ಯ ಪಡೆಯುವುದರ ಫಲಿತಾಂಶವಾಗಿರುವುದಿಲ್ಲ. ಅದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸುವ ಒಂದು ವಿಚಾರದಲ್ಲಿ ಆಸಕ್ತಿಯನ್ನು ಕೆರಳಿಸುವುದರ ವಿಷಯವಾಗಿದೆ. ಒಮ್ಮೆ ನಾವು ಮುಂಚಿತವಾಗಿ ತಯಾರಿಸಿದ ಬಳಿಕ, ನಾವು ಜನರನ್ನು ಸ್ನೇಹಭಾವದ ಸಂಭಾಷಣೆಗಳಲ್ಲಿ ತೊಡಗಿಸಲು ಸಿದ್ಧರಾಗಿರುವೆವು. ದೊರೆಯುವ ಅತ್ಯುತ್ತಮ ವಾರ್ತೆಯನ್ನು, ನಿತ್ಯರಾಜ್ಯಾಶೀರ್ವಾದಗಳ ವಾರ್ತೆಯನ್ನು ಹಂಚುವ ಮೂಲಕ, ನಾವು ಭೇಟಿಯಾಗುವ ಜನರ ಹೃದಯಗಳನ್ನು ತಲಪಲು ಪ್ರಯತ್ನಿಸೋಣ.—2 ಪೇತ್ರ 3:13.