ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಸೆಪ್ಟೆಂಬರ್‌ ಪು. 8
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಾಕ್ಷಿಕೊಡಲು ಸಹಾಯಮಾಡುವ ಸಂಭಾಷಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಾಕ್ಷಿಕೊಡಲು ಸಹಾಯಮಾಡುವ ಸಂಭಾಷಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅನೌಪಚಾರಿಕವಾಗಿ ಸಾಕ್ಷಿ ನೀಡಲು ಮೊದಲ ಹೆಜ್ಜೆ ತೆಗೆದುಕೊಳ್ಳಿ
    2014 ನಮ್ಮ ರಾಜ್ಯದ ಸೇವೆ
  • ಆಸಕ್ತಿ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಸಂಭಾಷಣೆ ಶುರು ಮಾಡೋದು ಹೇಗೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಸೆಪ್ಟೆಂಬರ್‌ ಪು. 8

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು​—ಸಾಕ್ಷಿಕೊಡಲು ಸಹಾಯಮಾಡುವ ಸಂಭಾಷಣೆಗಳು

ಯೇಸು ಸಮಾರ್ಯದ ಸ್ತ್ರೀಯನ್ನು ಮಾತಾಡಿಸಲು ಪ್ರಯತ್ನಿಸಿದ್ದರಿಂದ ಅನೌಪಚಾರಿಕವಾಗಿ ಸಾಕ್ಷಿಕೊಡಲು ಸಾಧ್ಯವಾಯಿತು. ಅಪರಿಚಿತರೊಂದಿಗೆ ಸಂಭಾಷಣೆಯನ್ನು ಆರಂಭಿಸುವ ಕೌಶಲವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?

ಯೇಸು ಬಾವಿಯ ಬಳಿ ಸಮಾರ್ಯದ ಸ್ತ್ರೀಯೊಟ್ಟಿಗೆ ಮಾತಾಡುತ್ತಿದ್ದಾನೆ
  • ಸ್ನೇಹಭಾವದಿಂದ ಮಾತಾಡಿ. ಆಯಾಸವಾಗಿದ್ದರೂ “ನೀರು ಕೊಡು” ಎಂದು ಕೇಳುತ್ತಾ ಯೇಸು ಮಾತು ಆರಂಭಿಸಿದನು. ನೀವು ಸಹ ಮಾತು ಆರಂಭಿಸುವಾಗ ಮುಗುಳ್ನಗೆ ಬೀರಿ. ನಂತರ ಹವಾಮಾನದ ಬಗ್ಗೆ ಅಥವಾ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಮಾತಾಡಬಹುದು. ಸಂಭಾಷಣೆಯನ್ನು ಆರಂಭಿಸುವುದಷ್ಟೆ ನಿಮ್ಮ ಮೊದಲ ಗುರಿಯಾಗಿರಲಿ. ಹಾಗಾಗಿ ನೀವು ಮಾತಾಡಲು ಬಯಸುವ ವ್ಯಕ್ತಿಗೆ ಯಾವ ವಿಷಯ ಇಷ್ಟ ಆಗಬಹುದು ಅಂತ ಯೋಚಿಸಿ ಅದರ ಬಗ್ಗೆ ಮಾತು ಆರಂಭಿಸಿ. ಅವರು ಪ್ರತಿಕ್ರಿಯಿಸಲಿಲ್ಲ ಅಂದರೆ ಪರ್ವಾಗಿಲ್ಲ, ಇನ್ನೊಬ್ಬರ ಜೊತೆ ಮಾತಾಡಲು ಪ್ರಯತ್ನಿಸಿ.ಧೈರ್ಯ ಕೊಡುವಂತೆ ಯೆಹೋವನನ್ನು ಕೇಳಿ.—ನೆಹೆ 2:4; ಅಕಾ 4:29.

  • ಮಾತಾಡುತ್ತಿರುವಾಗ ಸುವಾರ್ತೆಯನ್ನು ಹೇಳಲು ಸೂಕ್ತ ಸಂದರ್ಭಕ್ಕಾಗಿ ಕಾಯಿರಿ, ಅವಸರಪಡಬೇಡಿ. ನಿಮ್ಮಿಬ್ಬರ ಮಧ್ಯೆ ಸಂಭಾಷಣೆ ಸ್ವಲ್ಪ ಹೊತ್ತು ನಡೆಯಲಿ. ನೀವು ಅವಸರದಿಂದ ಸಾಕ್ಷಿಕೊಟ್ಟರೆ ಅವರಿಗೆ ಇಷ್ಟವಾಗದೆ ಸಂಭಾಷಣೆನೇ ನಿಂತುಹೋಗಬಹುದು. ಸಾಕ್ಷಿಕೊಡುವ ಮುಂಚೆನೇ ಸಂಭಾಷಣೆ ಮುಗಿದುಹೋದರೆ ಬೇಜಾರಾಗಬೇಡಿ. ಅನೌಪಚಾರಿಕ ಸಾಕ್ಷಿಕೊಡಲು ಭಯವಾದರೆ, ಸಾಕ್ಷಿಕೊಡುವ ಉದ್ದೇಶ ಬಿಟ್ಟು ಜನರ ಹತ್ತಿರ ಮಾತುಕತೆ ಆರಂಭಿಸುವುದನ್ನು ಅಭ್ಯಾಸಮಾಡಿ. [1​ನೇ ವಿಡಿಯೋ ಹಾಕಿ ಚರ್ಚಿಸಿ.]

  • ಸಾಕ್ಷಿಕೊಡಲು ಅವಕಾಶವನ್ನು ಸೃಷ್ಟಿಸಬಹುದು. ಬೈಬಲಿನಲ್ಲಿರುವ ಯಾವುದೋ ಒಂದು ಬೋಧನೆ ನಿಮಗೆ ತುಂಬ ಇಷ್ಟ ಎಂದು ಹೇಳಿ. ಅದನ್ನು ಕೇಳಿ ಅವರು ಅದರ ಅರ್ಥ ಕೇಳಬಹುದು. ಯೇಸು ಇದನ್ನೇ ಮಾಡಿದನು. ಆಗ ಸಮಾರ್ಯದ ಸ್ತ್ರೀ ಕೆಲವು ಪ್ರಶ್ನೆಗಳನ್ನು ಕೇಳಿದಳು. ಯೇಸು ಸುವಾರ್ತೆ ಬಗ್ಗೆ ಮಾತಾಡಿದಾಗ ಆ ಸ್ತ್ರೀ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಂತಿತ್ತು ಅಷ್ಟೆ. [2​ನೇ ವಿಡಿಯೋ ಹಾಕಿ ಚರ್ಚಿಸಿ. ನಂತರ 3​ನೇ ವಿಡಿಯೋ ಹಾಕಿ ಚರ್ಚಿಸಿ.]

ಇಬ್ಬರು ಸ್ತ್ರೀಯರು ಚೆಂಡಾಟ ಆಡುತ್ತಿದ್ದಾರೆ

ಸಂಭಾಷಣೆಯನ್ನು ಆರಂಭಿಸುವುದು ಹೆಚ್ಚುಕಡಿಮೆ ಒಂದು ಚೆಂಡಾಟದಂತೆ ಇದೆ. ಇವೆರಡಕ್ಕೂ ಕಡಿಮೆಪಕ್ಷ ಇಬ್ಬರು ವ್ಯಕ್ತಿಗಳಾದರೂ ಬೇಕು ಮತ್ತು ಇವೆರಡನ್ನು ಆರಂಭಿಸುವುದು ಕೂಡ ಸುಲಭ. ನಿಮಗೆ ಅವಕಾಶ ಸಿಕ್ಕಾಗ ನೀವೇ ಮೊದಲು ಮಾತಾಡಲು ಪ್ರಯತ್ನಿಸಿ ಮತ್ತು ಸಂಭಾಷಣೆಯನ್ನು ಆರಂಭಿಸಬಹುದಾ ಎಂದು ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ