ವಿಷಯಗಳು ಅಭಿವೃದ್ಧಿಹೊಂದುವಂತೆ ಮಾಡಲಿಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಿರಿ
1 “ಒಂದು ಹೊಸ ಸಭೆಯನ್ನು ಸ್ಥಾಪಿಸಲು ನೆರವಾಗುವ ಅಪೂರ್ವ ಆನಂದವನ್ನು ನಾನು ಮೊತ್ತಮೊದಲ ಬಾರಿಗೆ ಅನುಭವಿಸಿದೆ. ಇದು ಎರಡು ವರ್ಷಗಳಿಗಿಂತಲೂ ಹೆಚ್ಚಿನ ಸಮಯದ ಶ್ರದ್ಧಾಪೂರ್ವಕ ಕೆಲಸ, ಸತತ ಪ್ರಾರ್ಥನೆ ಮತ್ತು ‘ವಿಷಯಗಳು ಅಭಿವೃದ್ಧಿಹೊಂದುವಂತೆ ಮಾಡುವ’ (NW) ಯೆಹೋವನ ಮೇಲೆ ಆತುಕೊಳ್ಳುವುದನ್ನು ಕೇಳಿಕೊಂಡಿತು.” ಅಭಿವೃದ್ಧಿಗಾಗಿ ಯೆಹೋವನ ಮೇಲೆ ಆತುಕೊಳ್ಳುವ ಅಗತ್ಯವನ್ನು ಕಲಿತ ಒಬ್ಬ ನ್ಯಾಯನಿಷ್ಠ ಪಯನೀಯರನು ಹೀಗೆ ಬರೆದನು. (1 ಕೊರಿಂ. 3:5-9) ಆತ್ಮಿಕ ಪ್ರವೃತ್ತಿಯುಳ್ಳ ಜನರಿಗಾಗಿರುವ ನಮ್ಮ ಅನ್ವೇಷಣೆಯಲ್ಲಿ, ನಮ್ಮ ಶುಶ್ರೂಷೆಯು ಫಲವನ್ನು ಫಲಿಸಬೇಕಾದರೆ, ನಮಗೂ ದೇವರ ಬೆಂಬಲದ ಅಗತ್ಯವಿದೆ.—ಜ್ಞಾನೋ. 3:5, 6.
2 ಬೆಳವಣಿಗೆಗೆ ಬೇಸಾಯ ಅಗತ್ಯ: ಸತ್ಯದ ಬೀಜವು ಬೆಳೆಯಬೇಕಾದರೆ, ಅದಕ್ಕೆ ಬೇಸಾಯಮಾಡುವ ಅಗತ್ಯವಿದೆ. ಆರಂಭದ ಭೇಟಿಯ ಒಂದೆರಡು ದಿನಗಳೊಳಗೆ ಪುನರ್ಭೇಟಿಮಾಡುವುದು, ಅನೇಕವೇಳೆ ಒಳ್ಳೆಯ ಪ್ರತಿಫಲಗಳನ್ನು ಉತ್ಪಾದಿಸುತ್ತದೆ. ಆದರಣೀಯರೂ ಸ್ನೇಹಪರರೂ ಆಗಿರಿ. ಇನ್ನೊಬ್ಬ ವ್ಯಕ್ತಿಯನ್ನು ನಿರಾತಂಕವಾಗಿರುವಂತೆ ಮಾಡಿ. ನೀವೇ ಮಾತಾಡುತ್ತಾ ಇರಬೇಡಿರಿ. ಅವನು ನಿಮ್ಮನ್ನು ಅರ್ಥಮಾಡಿಕೊಳ್ಳುವಂತೆ ಅನುಮತಿಸಿರಿ, ಮತ್ತು ಒಬ್ಬ ವ್ಯಕ್ತಿಯೋಪಾದಿ ನೀವು ಅವನಲ್ಲಿ ಆಸಕ್ತರಿದ್ದೀರೆಂಬುದನ್ನು ತೋರಿಸಿರಿ.
3 ಜುಲೈ ತಿಂಗಳಿನಲ್ಲಿ ಆರಂಭಿಸಿ ಆಗಸ್ಟ್ ತಿಂಗಳ ಅಂತ್ಯದ ತನಕ, ನಾವು ಭೇಟಿಮಾಡುವ ಜನರಿಗೆ ವಿವಿಧ ಬ್ರೋಷರ್ಗಳನ್ನು ನೀಡುವುದರಲ್ಲಿ ನಾವು ಮನಸ್ಸನ್ನು ಕೇಂದ್ರೀಕರಿಸುತ್ತಿದ್ದೇವೆ. ಆದರೂ, ಕಂಡುಕೊಳ್ಳಲ್ಪಡುವ ಆಸಕ್ತಿ ಹಾಗೂ ನೀಡಲ್ಪಟ್ಟಿರುವ ಕೊಡಿಕೆಗಳನ್ನು ಸಹ ನಾವು ಅನುಸರಿಸಿಕೊಂಡುಹೋಗುವ ಅಗತ್ಯವಿದೆ. ಪುನರ್ಭೇಟಿಗಳನ್ನು ಮಾಡಿ, ಬೈಬಲ್ ಅಭ್ಯಾಸಗಳನ್ನು ನೀಡುವ ಮೂಲಕ ನಾವಿದನ್ನು ಮಾಡುತ್ತೇವೆ. (ಮತ್ತಾ. 28:19, 20) ಈ ಕಾರಣಕ್ಕಾಗಿ, ಅಭ್ಯಾಸಗಳನ್ನು ಆರಂಭಿಸಲು ಅಪೇಕ್ಷೆ ಬ್ರೋಷರನ್ನು ಉಪಯೋಗಿಸಬಹುದು. ಈ ಕೆಳಗಿನ ನಾಲ್ಕು ಸಲಹೆಗಳನ್ನು ನೀವು ಸಹಾಯಕರವಾದವುಗಳಾಗಿ ಕಂಡುಕೊಳ್ಳಬಹುದು.
4 ಲೋಕದ ಕೆಟ್ಟುಹೋಗುತ್ತಿರುವ ಪರಿಸ್ಥಿತಿಗಳ ಕುರಿತು ಚಿಂತೆಯುಳ್ಳವರಾಗಿದ್ದ ಯಾರೊಂದಿಗಾದರೂ ನೀವು ಮಾತಾಡಿದ್ದಲ್ಲಿ, ಹೀಗೆ ಹೇಳುವ ಮೂಲಕ ನೀವು ಸಂಭಾಷಣೆಯನ್ನು ಮತ್ತೆ ಪ್ರಾರಂಭಿಸಬಹುದು:
◼“ಮಾನವ ಸಮಾಜದಲ್ಲಿನ ನೈತಿಕ ಅವನತಿಯ ಕುರಿತು ನಾನು ಚಿಂತಿತನಾಗಿರುವಂತೆಯೇ ನೀವೂ ಚಿಂತಿತರಾಗಿದ್ದೀರೆಂದು ನಾನು ನಂಬುತ್ತೇನೆ. ಮಕ್ಕಳು, ಹೆತ್ತವರು, ಮತ್ತು ವಿವಾಹ ಸಂಗಾತಿಗಳ ದುರುಪಚಾರದಲ್ಲಿ ಫಲಿಸುವ ಮನೆಯ ಹಿಂಸಾಚಾರದ ಕುರಿತಾದ ವಿಷಾದಕರ ವರದಿಗಳನ್ನು ನಾವು ಕೇಳಿಸಿಕೊಳ್ಳುತ್ತೇವೆ. ಮತ್ತು ತಮ್ಮ ಸ್ವಂತ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ, ಸುಳ್ಳು ಹೇಳುವ ಅಥವಾ ಕದಿಯುವ ವಿಷಯದಲ್ಲಿ ಅನೇಕ ಜನರು ಯಾವ ಚಿಂತೆಯನ್ನೂ ಮಾಡುವುದಿಲ್ಲವೆಂದು ತೋರುತ್ತದೆ. ಜನರು ತಮ್ಮ ಜೀವಿತಗಳನ್ನು ಜೀವಿಸುವ ರೀತಿಯು ದೇವರಿಗೆ ಸಂಬಂಧಿಸಿದ್ದಾಗಿದೆ ಎಂದು ನೀವು ಯೋಚಿಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಜನರು ಜೀವನದಲ್ಲಿ ಅನುಸರಿಸಿ ನಡೆಯಲಿಕ್ಕಾಗಿ ದೇವರು ಕೆಲವೊಂದು ಮಟ್ಟಗಳನ್ನು ಸ್ಥಾಪಿಸಿದ್ದಾನೆ, ಮತ್ತು ಅವು ನಿಜವಾಗಿಯೂ ನಮಗೆ ಹೊರೆಯಾಗಿರುವುದಿಲ್ಲ.” 1 ಯೋಹಾನ 5:3ನ್ನು ಓದಿ. ತದನಂತರ ಅಪೇಕ್ಷೆ ಬ್ರೋಷರನ್ನು ನೀಡಿ, ಅದನ್ನು ಪಾಠ 10ಕ್ಕೆ ತೆರೆಯಿರಿ. ಮೊದಲನೆಯ ಪ್ಯಾರಗ್ರಾಫನ್ನು ಓದಿರಿ. 2-6ನೆಯ ಪ್ಯಾರಗ್ರಾಫ್ಗಳ ಆರಂಭದಲ್ಲಿರುವ, ಓರೆಅಕ್ಷರಗಳು ಹಾಗೂ ವಾಕ್ಸರಣಿಗಳನ್ನು ತೋರಿಸಿರಿ, ಮತ್ತು ಅವನು ಅಥವಾ ಅವಳು, ಯಾವ ಅಭ್ಯಾಸವು ಸಮಾಜಕ್ಕೆ ಅತ್ಯಂತ ಹಾನಿಕರವಾದದ್ದಾಗಿದೆಯೆಂದು ಭಾವಿಸುತ್ತಾರೆಂಬುದನ್ನು ಮನೆಯವರಿಗೆ ಕೇಳಿರಿ. ಸಂಬಂಧಿತ ಪ್ಯಾರಗ್ರಾಫನ್ನು ಓದಿ, ಸಂದರ್ಭವು ಅನುಮತಿಸಿದಂತೆ ಒಂದೆರಡು ಶಾಸ್ತ್ರವಚನಗಳನ್ನು ತೆರೆದು ನೋಡಿರಿ. 7ನೆಯ ಪ್ಯಾರಗ್ರಾಫನ್ನು ಓದುವ ಮೂಲಕ ಮುಕ್ತಾಯಗೊಳಿಸಿರಿ. ಮತ್ತು ತದನಂತರ ಇನ್ನೂ ಹೆಚ್ಚಿನ ಚರ್ಚೆಗಾಗಿ ಪುನಃ ಹಿಂದಿರುಗಿ ಹೋಗಲು ಏರ್ಪಾಡುಗಳನ್ನು ಮಾಡಿರಿ.
5 ತಮ್ಮ ಕುಟುಂಬದ ವಿಷಯದಲ್ಲಿ ಚಿಂತಿತರಾಗಿರುವವರನ್ನು ನೀವು ಸಂಧಿಸಿರುವಾಗ, ನೀವು ಹೀಗೆ ಏನನ್ನಾದರೂ ಹೇಳಸಾಧ್ಯವಿದೆ:
◼“ಯಶಸ್ವಿಕರವಾದ ಒಂದು ಕುಟುಂಬ ಜೀವನವನ್ನು ಕಟ್ಟಲಿಕ್ಕಾಗಿ ಅಗತ್ಯವಿರುವ ಉಪಕರಣಗಳನ್ನು ಸೃಷ್ಟಿಕರ್ತನು ನಮಗೆ ಕೊಡುವನೆಂಬುದನ್ನು ನಿರೀಕ್ಷಿಸುವುದು ಸಮಂಜಸವಾದದ್ದಾಗಿದೆಯೆಂದು ನೀವು ಭಾವಿಸುತ್ತೀರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅಪೇಕ್ಷೆ ಬ್ರೋಷರನ್ನು ಪರಿಚಯಿಸಿ, ಪಾಠ 8ನ್ನು ತೆರೆಯಿರಿ, ಮತ್ತು ಅದು ಕುಟುಂಬದ ಪ್ರತಿಯೊಬ್ಬ ಸದಸ್ಯನಿಗಾಗಿ ಬೈಬಲಿನಿಂದ ಆಯ್ದ ಮೂಲತತ್ವಗಳನ್ನು ಒಳಗೊಂಡಿದೆ ಎಂಬುದನ್ನು ವಿವರಿಸಿರಿ. ಆ ಬ್ರೋಷರಿನಿಂದ ಅತ್ಯುತ್ತಮವಾದ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಅದನ್ನು ಬೈಬಲಿನೊಂದಿಗೆ ಉಪಯೋಗಿಸುವ ವಿಧವನ್ನು ಪ್ರತ್ಯಕ್ಷಾಭಿನಯಿಸುತ್ತೇವೆಂದು ಹೇಳಿರಿ. ಈ ಬ್ರೋಷರ್ನ 2ನೆಯ ಪುಟದಲ್ಲಿ ಕಂಡುಬರುವ ಸೂಚನೆಗಳನ್ನು ಅನುಸರಿಸಿರಿ. ಆ ಪಾಠದ ಅಭ್ಯಾಸವನ್ನು ಮುಂದುವರಿಸಲು, ಅಥವಾ ನೀವು ಅದನ್ನು ಈಗಾಗಲೇ ಪೂರ್ಣಗೊಳಿಸುವಲ್ಲಿ, ಮನೆಯವನು ಈ ಬ್ರೋಷರ್ನಲ್ಲಿ ಆಯ್ಕೆಮಾಡಿರುವ ಇನ್ನೊಂದು ಪಾಠವನ್ನು ಅಭ್ಯಾಸಿಸಲು ಹಿಂದಿರುಗಿ ಹೋಗುವ ಏರ್ಪಾಡುಗಳನ್ನು ಮಾಡಿರಿ.
6 ನಮ್ಮ ಬೈಬಲ್ ಅಭ್ಯಾಸ ಕಾರ್ಯಕ್ರಮವನ್ನು ನೀಡಲಿಕ್ಕಾಗಿ ನೀವು ಉಪಯೋಗಿಸಬಹುದಾದ ಒಂದು ನೇರವಾದ ಪ್ರಸ್ತಾವವು ಇಲ್ಲಿದೆ. “ಅಪೇಕ್ಷೆ” ಬ್ರೋಷರನ್ನು ತೋರಿಸಿ, ಹೀಗೆ ಹೇಳಿರಿ:
◼“ಈ ಬ್ರೋಷರ್, ಬೈಬಲಿನ ಮೂಲಭೂತ ಬೋಧನೆಗಳನ್ನು ಆವರಿಸುವ ಒಂದು ಸಮಗ್ರ ಅಧ್ಯಯನ ಕ್ರಮವನ್ನು ಒಳಗೊಂಡಿದೆ. ಪ್ರತಿಯೊಂದು ಪುಟದಲ್ಲಿ, ಶತಮಾನಗಳಿಂದ ಜನರಿಗೆ ಕ್ಷೋಭೆಯನ್ನುಂಟುಮಾಡಿರುವ ಪ್ರಶ್ನೆಗಳಿಗೆ ನೀವು ಉತ್ತರಗಳನ್ನು ಕಂಡುಕೊಳ್ಳುವಿರಿ. ಉದಾಹರಣೆಗಾಗಿ, ಭೂಮಿಗಾಗಿ ದೇವರ ಉದ್ದೇಶವು ಏನು?” ಪಾಠ 5ನ್ನು ತೆರೆಯಿರಿ, ಮತ್ತು ಪಾಠದ ಆರಂಭದಲ್ಲಿರುವ ಪ್ರಶ್ನೆಗಳನ್ನು ಓದಿರಿ. ಮನೆಯವನಿಗೆ ಯಾವ ಪ್ರಶ್ನೆಯು ಅತ್ಯಂತ ಆಸಕ್ತಿಕರವಾಗಿದೆ ಎಂಬುದನ್ನು ಅವನಿಗೆ ಕೇಳಿರಿ, ಮತ್ತು ತದನಂತರ ಅದಕ್ಕೆ ಅನುಗುಣವಾದ ಪ್ಯಾರಗ್ರಾಫ್(ಗಳ)ನ್ನು ಓದಿ, ಸೂಕ್ತವಾದ ಶಾಸ್ತ್ರವಚನಗಳನ್ನು ತೆರೆದು ನೋಡಿರಿ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡಷ್ಟೇ ಸುಲಭವಾಗಿ ಇತರ ಪ್ರಶ್ನೆಗಳಿಗೂ ಸಂತೃಪ್ತಿಕರವಾದ ಉತ್ತರಗಳನ್ನು ಕಂಡುಕೊಳ್ಳಸಾಧ್ಯವಿದೆ ಎಂಬುದನ್ನು ವಿವರಿಸಿರಿ. ಇನ್ನೊಂದು ಪ್ರಶ್ನೆ ಹಾಗೂ ಉತ್ತರವನ್ನು ಚರ್ಚಿಸಲಿಕ್ಕಾಗಿ ನೀವು ಪುನಃ ಹಿಂದಿರುಗುವಿರೆಂದು ಹೇಳಿರಿ.
7 ಅಥವಾ ಹೀಗೆ ಹೇಳುವ ಮೂಲಕ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲಿಕ್ಕಾಗಿರುವ ಸರಳವಾದ ಪ್ರಸ್ತಾವವನ್ನು ಪ್ರಯತ್ನಿಸಲು ನೀವು ಇಷ್ಟಪಡಬಹುದು:
◼“ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುವ ಮೂಲಕ, ಪ್ರಾಮುಖ್ಯವಾದ ಒಂದು ಪ್ರಶ್ನೆಗೆ ಉತ್ತರವನ್ನು ನೀವು ಕಂಡುಕೊಳ್ಳಸಾಧ್ಯವಿದೆ ಎಂಬುದು ನಿಮಗೆ ತಿಳಿದಿತ್ತೊ? ಉದಾಹರಣೆಗಾಗಿ, . . .” ಬಳಿಕ, ಬ್ರೋಷರ್ನಲ್ಲಿರುವ ಪಾಠಗಳಲ್ಲೊಂದರ ಆರಂಭದಲ್ಲಿ ಕಂಡುಬರುವ ಪ್ರಶ್ನೆಯೊಂದನ್ನು—ಆ ವ್ಯಕ್ತಿಗೆ ಹಿಡಿಸಬಹುದೆಂದು ನೀವು ಭಾವಿಸುವಂತಹ ಒಂದು ವಿಷಯ—ಹೇಳಿರಿ. ನೀವು ಉಪಯೋಗಿಸಬಹುದಾದ ಪ್ರಶ್ನೆಗಳ ಕೆಲವೊಂದು ಅಭಿಪ್ರಾಯಗಳಿಗಾಗಿ, ಮಾರ್ಚ್ 1997ರ ನಮ್ಮ ರಾಜ್ಯದ ಸೇವೆಯ, “ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಧೈರ್ಯವನ್ನು ಒಟ್ಟುಗೂಡಿಸಿರಿ” ಎಂಬ ಶಿರೋನಾಮವುಳ್ಳ ಪುರವಣಿಯ, 15 ಹಾಗೂ 16ನೆಯ ಪ್ಯಾರಗ್ರಾಫ್ಗಳನ್ನು ನೋಡಿರಿ.
8 ಪುನರ್ಭೇಟಿಗಳನ್ನು ಮಾಡುವುದು ಹಾಗೂ ಬೈಬಲ್ ಅಭ್ಯಾಸಗಳನ್ನು ನಡೆಸುವುದರ ಪಂಥಾಹ್ವಾನವನ್ನು ಆನಂದದಿಂದ ಅಂಗೀಕರಿಸುವುದು, ದೇವರ “ಜೊತೆ ಕೆಲಸದವ”ರಾಗಿರುವುದರ ಭಾಗವಾಗಿದೆ. (1 ಕೊರಿಂ. 3:9) ನಾವು ಕಂಡುಕೊಳ್ಳುವ ಆಸಕ್ತಿಯನ್ನು ಬೆಳೆಸಲಿಕ್ಕಾಗಿ ನಾವು ಶ್ರಮಪಟ್ಟು, ತದನಂತರ ವಿಷಯಗಳು ಅಭಿವೃದ್ಧಿಹೊಂದುವಂತೆ ಮಾಡಲಿಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳುವಾಗ, ಇನ್ನಾವುದೇ ಕೆಲಸವು ಉತ್ಪಾದಿಸದಂತಹ ನೈಜ ಸಂತೃಪ್ತಿಯನ್ನು ನಾವು ಅನುಭವಿಸುವೆವು.