ಪತ್ರಿಕಾ ದಿನದ ಚಟುವಟಿಕೆಯಲ್ಲಿ ನೀವು ಪಾಲ್ಗೊಳ್ಳುತ್ತೀರೋ?
1 ಭಾರತದಲ್ಲಿ 18 ಕೋಟಿಗಿಂತ ಹೆಚ್ಚು ಜನರು ಕ್ರಮವಾಗಿ ಪತ್ರಿಕೆಗಳು ಮತ್ತು ವಾರ್ತಾಪತ್ರಿಕೆಗಳನ್ನು ಖರೀದಿಸುತ್ತಾರೆ. ಈ ಪ್ರಕಾಶನಗಳನ್ನು ನಂತರ ಕೋಟ್ಯನುಕೋಟಿ ಜನರು ಓದುತ್ತಾರೆ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಅವರ ಕ್ರಮವಾದ ಓದುವಿಕೆಯ ಭಾಗವಾಗಿರುತ್ತಿದ್ದಲ್ಲಿ ಅದೆಷ್ಟು ಪ್ರಯೋಜನಕಾರಿಯಾಗಿರುತ್ತಿತ್ತು. ನಾವು ಪತ್ರಿಕಾ ದಿನದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಾದರೆ ಇದನ್ನು ಸಾಧಿಸಸಾಧ್ಯವಿದೆ.
2 ನಮ್ಮ 2004ರ ಕ್ಯಾಲೆಂಡರ್ ಪ್ರತಿಯೊಂದು ಶನಿವಾರವನ್ನು ಪತ್ರಿಕಾ ದಿನವೆಂದು ಸೂಚಿಸುತ್ತದೆ. ಇದಕ್ಕನುಸಾರವಾಗಿ, ಅನೇಕ ಸಭೆಗಳು ಒಂದು ನಿರ್ದಿಷ್ಟ ದಿನವನ್ನು ಗೊತ್ತುಪಡಿಸಿ, ಅದನ್ನು ಪ್ರಧಾನವಾಗಿ ಪತ್ರಿಕಾ ಸಾಕ್ಷಿಕಾರ್ಯಕ್ಕಾಗಿ ಉಪಯೋಗಿಸುತ್ತವೆ. ಪ್ರತಿ ತಿಂಗಳು ನಮ್ಮ ರಾಜ್ಯದ ಸೇವೆಯಲ್ಲಿ ಕೊಡಲ್ಪಡುವ ರೀತಿಯ ಸಂಕ್ಷಿಪ್ತ ನಿರೂಪಣೆಯನ್ನು ಉಪಯೋಗಿಸುತ್ತಾ ಹೆಚ್ಚು ಪ್ರಮಾಣದ ಟೆರಿಟೊರಿಯನ್ನು ಆವರಿಸುವಂತೆ ಪತ್ರಿಕಾ ದಿನಗಳು ಅವಕಾಶಮಾಡಿಕೊಡುತ್ತವೆ. ಇತರ ದಿನಗಳಲ್ಲಿ ನಾವು ಮನೆಯವರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಾ ಅವರೊಂದಿಗೆ ಲೋಕ ಪರಿಸ್ಥಿತಿಗಳ ಕುರಿತು ಮಾತಾಡಬಹುದು ಮತ್ತು ವಿಶೇಷ ಕಾರ್ಯಾಚರಣೆಯ ಪ್ರಕಾಶನಗಳನ್ನು ನೀಡಬಹುದು ಅಥವಾ ಅಪೇಕ್ಷಿಸು ಬ್ರೋಷರ್ನಿಂದ ಒಂದು ಬೈಬಲ್ ಅಧ್ಯಯನ ಮಾಡುವ ಪ್ರಸ್ತಾಪವನ್ನು ಮುಂದಿಡಬಹುದು.
3 ನಿಮ್ಮ ಸಭೆಯ ಪತ್ರಿಕಾ ದಿನವನ್ನು ನೀವು ಹೇಗೆ ಬೆಂಬಲಿಸಬಲ್ಲಿರಿ?
◼ ಪತ್ರಿಕೆಗಳನ್ನು ಓದಿರಿ: ಸರಾಸರಿಯಾಗಿ, ತನ್ನ ಸರ್ಕಿಟ್ನಲ್ಲಿರುವ 20ರಲ್ಲಿ ಒಬ್ಬ ಪ್ರಚಾರಕ ಮಾತ್ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಮೊದಲ ಪುಟದಿಂದ ಕೊನೆಯ ಪುಟದ ತನಕ ಓದುತ್ತಾನೆ ಎಂದು ಒಬ್ಬ ಸಂಚರಣ ಮೇಲ್ವಿಚಾರಕನು ವರದಿಸಿದನು. ನೀವು ಪತ್ರಿಕೆಗಳನ್ನು ಸಂಪೂರ್ಣವಾಗಿ ಓದುತ್ತೀರೋ? ನೀವು ಪ್ರತಿ ಲೇಖನವನ್ನು ಓದುವಾಗ, ‘ಈ ಮಾಹಿತಿಯನ್ನು ಯಾರು ಗಣ್ಯಮಾಡುವರು—ಒಬ್ಬ ತಾಯಿಯೋ, ಒಬ್ಬ ಹಿಂದೂ ವ್ಯಾಪಾರಿಯೋ, ಅಥವಾ ಒಬ್ಬ ಮುಸ್ಲಿಮ್ ಯುವಕನೋ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ಒಂದು ಪತ್ರಿಕೆಯನ್ನು ನೀಡುವಾಗ ಉಪಯೋಗಿಸಬಹುದಾದ ಒಂದೆರಡು ಅಂಶಗಳನ್ನು ಆ ಪತ್ರಿಕೆಯ ನಿಮ್ಮ ಸ್ವಂತ ಪ್ರತಿಯಲ್ಲಿ ಗುರುತಿಸಿರಿ. ಅನಂತರ, ಕೇವಲ ಒಂದು ಅಥವಾ ಎರಡು ವಾಕ್ಯಗಳಲ್ಲಿ ನೀವು ಹೇಗೆ ಆ ವಿಷಯವಸ್ತುವಿನಲ್ಲಿ ಒಬ್ಬನ ಆಸಕ್ತಿಯನ್ನು ಕೆರಳಿಸಬಹುದು ಎಂದು ಯೋಚಿಸಿರಿ.
◼ ಒಂದು ನಿಶ್ಚಿತ ಪತ್ರಿಕಾ ಆರ್ಡರಿನ ಏರ್ಪಾಡು ನಿಮಗಿರಲಿ: ಪ್ರತಿ ಸಂಚಿಕೆಯ ನಿಶ್ಚಿತ ಸಂಖ್ಯೆಯ ಪ್ರತಿಗಳಿಗಾಗಿ ಪತ್ರಿಕೆಗಳನ್ನು ನಿರ್ವಹಿಸುವ ಸಹೋದರ ಬಳಿ ಒಂದು ಪ್ರಾಯೋಗಿಕವಾದ ಆರ್ಡರನ್ನು ಮಾಡಿರಿ. ಈ ರೀತಿಯಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಪತ್ರಿಕೆಗಳ ಕ್ರಮವಾದ ಮತ್ತು ಸಾಕಷ್ಟು ಪ್ರಮಾಣದ ಸರಬರಾಯಿ ಲಭಿಸುವುದು.
◼ ಕ್ರಮವಾದ ಪತ್ರಿಕಾ ದಿನಕ್ಕಾಗಿ ಶೆಡ್ಯೂಲ್ ಮಾಡಿರಿ: ಸಭೆಯು ನಿಶ್ಚಯಿಸಿರುವ ಒಂದು ಅಥವಾ ಹೆಚ್ಚು ದಿನಗಳನ್ನು ಆರಿಸಿಕೊಂಡು ಪತ್ರಿಕಾ ಸಾಕ್ಷಿಕಾರ್ಯದಲ್ಲಿ ಕ್ರಮವಾಗಿ ಭಾಗವಹಿಸಿರಿ. ಇದು ಸಾಧ್ಯವಿಲ್ಲದಿರುವುದಾದರೆ, ನೀವು ಸೇವೆಯಲ್ಲಿ ವಿನಿಯೋಗಿಸುವ ಸ್ವಲ್ಪ ಸಮಯವನ್ನು ನಿಯತಕಾಲಿಕವಾಗಿ ಪತ್ರಿಕಾ ಬೀದಿ ಸಾಕ್ಷಿಕಾರ್ಯಕ್ಕಾಗಿ ಮತ್ತು ಮನೆಯಿಂದ ಮನೆ ಹಾಗೂ ಪತ್ರಿಕಾ ಮಾರ್ಗಗಳಲ್ಲಿ ಪತ್ರಿಕೆಗಳನ್ನು ವೈಯಕ್ತಿಕವಾಗಿ ವಿತರಿಸಲಿಕ್ಕಾಗಿ ಉಪಯೋಗಿಸಿರಿ.
◼ ಒಂದು ಸಂಕ್ಷಿಪ್ತ ಪತ್ರಿಕಾ ನಿರೂಪಣೆಯನ್ನು ಪೂರ್ವಾಭಿನಯಿಸಿರಿ: “ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?” ಎಂಬ ವಿಶೇಷ ಅಂಕಣದಲ್ಲಿ ಪ್ರತಿ ತಿಂಗಳು ಮಾದರಿ ನಿರೂಪಣೆಗಳು ಕೊಡಲ್ಪಡುತ್ತವೆ. ನಿಮ್ಮ ಬಳಿ ಹಳೇ ಪತ್ರಿಕೆಗಳು, ಅಥವಾ ಬೇರೆ ಭಾಷೆಗಳ ವಿಭಿನ್ನ ಸಂಚಿಕೆಗಳು ಇರುವುದಾದರೂ, ಹೊಸ ಪತ್ರಿಕೆಗಳನ್ನು ನೀಡಲು ಯೋಜಿಸಿರಿ ಮತ್ತು ಸೂಚಿತ ನಿರೂಪಣೆಗಳನ್ನು ಸಂಭಾಷಣೆಗೆ ತಕ್ಕ ಹಾಗೆ ಅಳವಡಿಸಿಕೊಳ್ಳಲು ತಯಾರಾಗಿರಿ.
◼ “ಕಾವಲಿನಬುರುಜು” ಮತ್ತು “ಎಚ್ಚರ!” ಪ್ರಜ್ಞೆಯುಳ್ಳವರಾಗಿರ್ರಿ: ಪ್ರಯಾಣಿಸುವಾಗ ಅಥವಾ ಶಾಪಿಂಗ್ ಮಾಡುವಾಗ ಪತ್ರಿಕೆಗಳ ಪ್ರತಿಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಸಹೋದ್ಯೋಗಿಗಳು, ನೆರೆಯವರು, ಸಹಪಾಠಿಗಳು, ಅಥವಾ ಶಿಕ್ಷಕರೊಂದಿಗೆ ಮಾತಾಡುವಾಗ ಪತ್ರಿಕೆಗಳನ್ನು ನೀಡಿರಿ.
4 ಸಭಾ ಹಿರಿಯರು ಹೇಗೆ ಸಹಾಯಮಾಡಬಲ್ಲರು?
◼ ಪತ್ರಿಕಾ ಚಟುವಟಿಕೆಯನ್ನು ಶೆಡ್ಯೂಲ್ ಮಾಡಿರಿ: ಟೆರಿಟೊರಿಯ ಎಲ್ಲಾ ಭಾಗಗಳಲ್ಲಿ ಪ್ರಾಯೋಗಿಕ ಏರ್ಪಾಡುಗಳನ್ನು ಮಾಡುವ ಮೂಲಕ ಅನೇಕರು ಭಾಗವಹಿಸಲು ಪ್ರೋತ್ಸಾಹಿಸಲ್ಪಡುವರು.
◼ ಕುರಿಪಾಲನಾ ಭೇಟಿಗಳ ಮೂಲಕ ಸಹಾಯ: ಪುಸ್ತಕ ಅಧ್ಯಯನ ಮೇಲ್ವಿಚಾರಕರು ಕ್ರಮವಾದ ಕುರಿಪಾಲನಾ ಕರೆಗಳನ್ನು ಮಾಡುವಾಗ, ಕುಟುಂಬಗಳು ಸರಳವಾದ ಪತ್ರಿಕಾ ನಿರೂಪಣೆಗಳನ್ನು ತಯಾರಿಸಿ ಪೂರ್ವಾಭಿನಯಿಸುವಂತೆ ಸಹಾಯಮಾಡಬಲ್ಲರು. ಅನೇಕ ಪ್ರಚಾರಕರು ಚೆನ್ನಾಗಿ ಪೂರ್ವಾಭ್ಯಾಸಮಾಡಿದ ಪತ್ರಿಕಾ ನಿರೂಪಣೆಯನ್ನು ಪ್ರಸ್ತುತಪಡಿಸುವ ಮೂಲಕ ಪ್ರಥಮ ಬಾರಿ ಶುಶ್ರೂಷೆಯಲ್ಲಿ ಮಾತಾಡಲು ಆರಂಭಿಸಿದ್ದಾರೆ.
◼ ಕ್ಷೇತ್ರ ಸೇವೆಗಾಗಿರುವ ಕೂಟಗಳನ್ನು ಉಪಯೋಗಿಸಿರಿ: ಪತ್ರಿಕಾ ದಿನದಂದು ಕ್ಷೇತ್ರ ಸೇವೆಯನ್ನು ಆರಂಭಿಸುವ ಮೊದಲು 10ರಿಂದ 15 ನಿಮಿಷಗಳನ್ನು ಪ್ರಸ್ತುತ ನಿರೂಪಣೆಗಳನ್ನು ಮರುಪರಿಶೀಲಿಸಲಿಕ್ಕಾಗಿ ವಿನಿಯೋಗಿಸಿರಿ.
◼ ಕ್ಷೇತ್ರ ಶುಶ್ರೂಷೆಯಲ್ಲಿ ಪ್ರಚಾರಕರೊಂದಿಗೆ ಸೇವೆಮಾಡಿರಿ: ಹೀಗೆ ಮಾಡುವ ಮೂಲಕ ಪತ್ರಿಕೆಗಳನ್ನು ಪರಿಣಾಮಕಾರಿಯಾಗಿ ಹೇಗೆ ನೀಡುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸುವ ಸಂದರ್ಭ ಸಿಗುತ್ತದೆ, ಮತ್ತು ಇದು ಹೊಸ ಪ್ರಚಾರಕರಿಗೆ ಪ್ರಯೋಜನಕರವಾಗಿರುವ ತರಬೇತಿಯನ್ನು ಒದಗಿಸುತ್ತದೆ.
5 ಕೋಟಿಗಟ್ಟಲೆ ಜನರು ಇನ್ನೂ ಸುವಾರ್ತೆಯನ್ನು ಕೇಳಿಸಿಕೊಳ್ಳಲಿಕ್ಕಿದೆ. ಅವರನ್ನು ಸತ್ಯದ ಕಡೆಗೆ ನಡೆಸಲು ಒಂದೇ ಒಂದು ಪತ್ರಿಕೆಯಲ್ಲಿ ಕಂಡುಬರುವ ಮಾಹಿತಿಯೇ ಸಾಕಾಗಿರಬಹುದು! ಘೋಷಿಸಲಿಕ್ಕಾಗಿ ಯೆಹೋವನು ನಮಗೆ ಒಂದು ಪುಳಕಿತಗೊಳಿಸುವಂಥ ಸಂದೇಶವನ್ನು ಕೊಟ್ಟಿದ್ದಾನೆ, ಮತ್ತು ಈ ಸಂದೇಶವನ್ನು ಇತರರಿಗೆ ತಲಪಿಸುವುದರಲ್ಲಿ ನಮ್ಮ ಪತ್ರಿಕೆಗಳು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭವಿಷ್ಯದಲ್ಲಿ ಪತ್ರಿಕಾ ವಿತರಣೆಯ ವಿಷಯದಲ್ಲಿ ನೀವು ಹೆಚ್ಚು ಪ್ರಜ್ಞೆಯುಳ್ಳವರಾಗಿರುವಿರೋ? ಇಲ್ಲಿ ಕೊಡಲ್ಪಟ್ಟ ಕೆಲವು ಸಲಹೆಗಳನ್ನು ನೀವು ಈ ವಾರಾಂತ್ಯವೇ ಅನ್ವಯಿಸುವಿರೋ? ನೀವು ಹೀಗೆ ಮಾಡುವುದಾದರೆ ಸಮೃದ್ಧವಾಗಿ ಆಶೀರ್ವದಿಸಲ್ಪಡುವಿರಿ.