ಬ್ರೋಷರ್ಗಳನ್ನು ನೀಡಿರುವಲ್ಲೆಲ್ಲಾ ಪುನರ್ಭೇಟಿಗಳನ್ನು ಮಾಡಿರಿ
1 ‘ತನ್ನ ವಿಷಯವಾದ ಅವರ ಯೋಚನೆ ಪುನರುಜ್ಜೀವಗೊಂಡ’ ಕಾರಣ ಅಪೊಸ್ತಲ ಪೌಲನು ಫಿಲಿಪ್ಪಿಯವರನ್ನು ಪ್ರಶಂಸಿಸಿದನು. (ಫಿಲಿ. 4:10) ಕ್ಷೇತ್ರ ಶುಶ್ರೂಷೆಗೆ ನಾವು ಅವರ ಉದಾಹರಣೆಯನ್ನು ಒಂದು ಮಾದರಿಯಂತೆ ಉಪಯೋಗಿಸುವುದಾದರೆ, ನಾವು ಸಾಕ್ಷಿಯನ್ನು ನೀಡುವವರ ಪರವಾಗಿ ‘ನಮ್ಮ ಯೋಚನೆಯನ್ನು ಪುನರುಜ್ಜೀವಿತಗೊಳಿಸುವೆವು’ ಮತ್ತು ಪುನರ್ಭೇಟಿಗಳನ್ನು ಮಾಡುವಂತೆ ಪ್ರೋತ್ಸಾಹಿಸಲ್ಪಡುವೆವು.
2 “ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?” ಎಂಬ ಬ್ರೋಷರನ್ನು ನೀವು ನೀಡಿರುವಲ್ಲಿ, ಈ ರೀತಿ ಏನನ್ನಾದರೂ ನೀವು ಹೇಳಬಹುದು:
◼ “ಹಿಂದಿನ ದಿನ ನಡೆದ ನಮ್ಮ ಸಂಭಾಷಣೆಯ ಕುರಿತು ನಾನು ಯೋಚಿಸುತ್ತಾ ಇದ್ದೆ ಮತ್ತು ಎರಡು ವಚನಗಳು ನನ್ನ ನೆನಪಿಗೆ ಬಂದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ದೇವರು ಭೂಮಿಯ ಆಳಿಕ್ವೆಯನ್ನು ವಹಿಸಿಕೊಳ್ಳುವುದರ ಕುರಿತು ನಾವು ಮಾತಾಡಿದೆವೆಂದು ನೀವು ಜ್ಞಾಪಿಸಿಕೊಳ್ಳಬಹುದು. ಇದು ಸಂಭವಿಸುವುದೆಂದು ಯೆಹೋವ ದೇವರು ಬೈಬಲಿನಲ್ಲಿ ವಾಗ್ದಾನಿಸಿದ್ದಾನೆ. [ದಾನಿಯೇಲ 2:44ನ್ನು ಓದಿರಿ.] ಅದು ನಿಜವಾಗಿಯೂ ಸಂಭವಿಸುವುದೆಂದು ನೀವು ನಂಬುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ತನ್ನ ವಾಗ್ದಾನಗಳನ್ನು ನೆರವೇರಿಸುವ ಆತನ ಸಾಮರ್ಥ್ಯದ ಕುರಿತು ದೇವರು ಏನು ಹೇಳುತ್ತಾನೆಂಬುದನ್ನು ಆಲಿಸಿರಿ. [ಯೆಶಾಯ 55:11ನ್ನು ಓದಿರಿ.] ದೇವರ ರಾಜ್ಯದಲ್ಲಿ ನಮ್ಮ ಭರವಸೆಯನ್ನು ಹಾಕುವಂತೆ ಅದು ನಮ್ಮನ್ನು ಉತ್ತೇಜಿಸಬಾರದೊ? ಆದರೆ ದೇವರು ತನ್ನ ವಾಗ್ದಾನಗಳನ್ನು ಯಾವಾಗ ನೆರವೇರಿಸುವನು?” ನಿಮ್ಮ ಮುಂದಿನ ಭೇಟಿಯಲ್ಲಿ ಆ ಪ್ರಶ್ನೆಯನ್ನು ನೀವು ಉತ್ತರಿಸುವಿರೆಂದು ವಿವರಿಸಿರಿ.
3 “ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ” ಎಂಬ ಬ್ರೋಷರನ್ನು ತೆಗೆದುಕೊಂಡ ವ್ಯಕ್ತಿಯನ್ನು ಪುನರ್ಭೇಟಿ ಮಾಡುವಾಗ, ಈ ಪ್ರಸ್ತಾವನೆಯನ್ನು ನೀವು ತೆಗೆದುಕೊಳ್ಳಬಹುದು:
◼ “ಮರಣದಲ್ಲಿ ಯಾರಾದರೊಬ್ಬರನ್ನು ಕಳೆದುಕೊಳ್ಳುವುದರ ಬಗ್ಗೆ ನಮ್ಮ ಚರ್ಚೆಯ ನೋಟದಲ್ಲಿ, ಹಿಂದಿರುಗಲು ವಿಶೇಷವಾದ ಪ್ರಯತ್ನವನ್ನು ನಾನು ಮಾಡಿದೆ.” ಪುಟ 30 ರಲ್ಲಿರುವ ದೃಷ್ಟಾಂತವನ್ನು ತೋರಿಸಿ ಹೀಗೆ ಹೇಳಿ: “ಜನರು ಪುನರುತ್ಥಾನಗೊಂಡು ತಮ್ಮ ಪ್ರಿಯ ಜನರೊಂದಿಗೆ ಪುನಃ ಐಕ್ಯಗೊಳ್ಳುವ ಈ ಸಂತೋಷಭರಿತ ದೃಶ್ಯದ ನೆನಪು ಇದೆಯೊ? ಇದು ಎಲ್ಲಿ ನಡೆಯಲಿದೆ—ಸ್ವರ್ಗದಲ್ಲೊ ಅಥವಾ ಭೂಮಿಯ ಮೇಲೊ ಎಂಬ ಪ್ರಶ್ನೆಯನ್ನು ನಾನು ನಿಮಗೆ ಕೇಳಿದ್ದೆ. ಬಹುಶಃ ಈ ಬ್ರೋಷರಿನ ಪುಟ 26 ರಲ್ಲಿ ನೀವು ಬೈಬಲಿನ ಉತ್ತರವನ್ನು ಕಂಡುಕೊಂಡಿರಿ.” ಮೂರರಿಂದ ಐದನೆಯ ಪ್ಯಾರಗ್ರಾಫ್ಗಳಲ್ಲಿರುವ ಮುಖ್ಯ ಅಂಶಗಳನ್ನು ಚರ್ಚಿಸಿರಿ ಮತ್ತು ಯೋಹಾನ 5:21, 28, 29ನ್ನು ಓದಿರಿ. ಸಮಯವು ಅನುಮತಿಸಿದಂತೆ, ಆ ಪುಟದಲ್ಲಿ ಉಳಿದಿರುವ ಯಾವುದೇ ವಚನಗಳನ್ನು ಓದಿರಿ.
4 “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ” ಎಂಬ ಬ್ರೋಷರಿನ ಸಹಾಯದಿಂದ ಒಂದು ಅಧ್ಯಯನವನ್ನು ನೀವು ಆರಂಭಿಸಿದಿರೊ? ಪುನರ್ಭೇಟಿಯಲ್ಲಿ ನೀವು ಇದನ್ನು ಮಾಡಸಾಧ್ಯವಿದೆ:
◼ ಪುನಃ ಪುಟ 30ಕ್ಕೆ ಗಮನ ಸೆಳೆಯಿರಿ ಮತ್ತು “ಯಾವ ವಿಧಾನಗಳಲ್ಲಿ ಬೈಬಲ್ ಪ್ರಾಮುಖ್ಯವಾಗಿದೆ?” ಎಂಬ ಪ್ರಶ್ನೆಯನ್ನು ತೋರಿಸಿರಿ. 3 ಮತ್ತು 4 ನೆಯ ಪುಟಗಳಿಗೆ ತಿರುಗಿಸಿರಿ ಮತ್ತು ಅಲ್ಲಿರುವ 1-4 ಪ್ಯಾರಗ್ರಾಫ್ಗಳನ್ನು ಹಾಗೂ ಬ್ರೋಷರಿನ ಮುಖಪುಟದಲ್ಲಿರುವ ದೃಷ್ಟಾಂತವನ್ನು ಪುನರ್ವಿಮರ್ಶಿಸಿರಿ. 4 ನೆಯ ಪ್ಯಾರಗ್ರಾಫ್ನ ಪಾದಟಿಪ್ಪಣಿಯಲ್ಲಿ ಉದ್ಧರಿಸಲ್ಪಟ್ಟ ಒಂದೆರಡು ವಚನಗಳನ್ನು ಓದಿರಿ. ಬೈಬಲು ಇಂತಹ ಒಂದು ಅದ್ಭುತಕರ ನಿರೀಕ್ಷೆಯನ್ನು ನೀಡುವ ಏಕೈಕ ಪುಸ್ತಕ ಎಂದು ವಿವರಿಸಿರಿ. ನಿಮ್ಮ ಮುಂದಿನ ಭೇಟಿಗಾಗಿ ಏರ್ಪಾಡುಗಳನ್ನು ಮಾಡಿರಿ. ಮೂರನೆಯ ಭೇಟಿಯ ನಂತರ, ಅಧ್ಯಯನವು ಮುಂದುವರಿಯುವುದೆಂದು ತೋರುವಲ್ಲಿ, ಒಂದು ಹೊಸ ಅಧ್ಯಯನದ ವರದಿ ನೀಡಲು ನೀವು ತೊಡಗಬಹುದು!
5 “ನಿತ್ಯಕ್ಕೂ ಬಾಳುವ ದೈವಿಕ ನಾಮ” (ಇಂಗ್ಲಿಷ್) ಎಂಬ ಬ್ರೋಷರಿನ ಚರ್ಚೆಯನ್ನು ಈ ರೀತಿಯಲ್ಲಿ ಮತ್ತೆ ಪ್ರಾರಂಭಿಸಬಹುದು:
◼ “ಈ ಮುಂಚೆ, ಬೈಬಲಿನಲ್ಲಿ ದೇವರ ನಾಮವನ್ನು ನಿಮಗೆ ತೋರಿಸಲು ನಾನು ಶಕ್ತನಾದೆ. ಯೆಹೋವ ಎಂಬ ನಾಮವನ್ನು ಅರಿಯುವುದು ಮತ್ತು ಉಪಯೋಗಿಸುವುದು ನಮ್ಮ ಆರಾಧನೆಯ ಪ್ರಮುಖ ಭಾಗವಾಗಿದೆ.” ಪುಟ 31ಕ್ಕೆ ತಿರುಗಿಸಿರಿ, ಕೊನೆಯ ನಾಲ್ಕು ಪ್ಯಾರಗ್ರಾಫ್ಗಳಲ್ಲಿರುವ ಮುಖ್ಯ ಅಂಶಗಳ ಪುನರ್ವಿಮರ್ಶೆ ಮಾಡಿರಿ ಮತ್ತು ಯೋಹಾನ 17:3 ಹಾಗೂ ಮೀಕ 4:5ನ್ನು ಓದಿರಿ. ದೇವರ ನಾಮವು ಹೇಗೆ ಯೋಗ್ಯವಾದ ವಿಧದಲ್ಲಿ ಪವಿತ್ರೀಕರಿಸಲ್ಪಡುವುದೆಂದು ಮತ್ತು ಪ್ರಮೋದವನ ಭೂಮಿಯ ಆಶೀರ್ವಾದಗಳನ್ನು ನಾವು ಹೇಗೆ ಅನುಭವಿಸಸಾಧ್ಯವೆಂದು ತೋರಿಸಬಲ್ಲ ಬೈಬಲ್ ಅಧ್ಯಯನದ ಕಾರ್ಯಕ್ರಮವನ್ನು ನಾವು ಒದಗಿಸುತ್ತೇವೆಂದು ವಿವರಿಸಿರಿ.
6 ಆದುದರಿಂದ ನೀವು ಸಂಪರ್ಕಿಸಿರುವವರ ಪರವಾಗಿ ನಿಮ್ಮ ಯೋಚನೆಯನ್ನು ಪುನರುಜ್ಜೀವಿತಗೊಳಿಸಿರಿ. ಹಿಂದಿರುಗುವುದರಲ್ಲಿ ಪಟ್ಟುಹಿಡಿದಿರುವವರಾಗಿರ್ರಿ ಮತ್ತು ಹಂಚಿಕೊಳ್ಳಲು ಪ್ರಯೋಜನಕರವಾದ ಏನನ್ನಾದರೂ ತಯಾರಿಸಿರಿ. ಹೊಸ ಶಿಷ್ಯರನ್ನು ಮಾಡುವುದರಲ್ಲಿ ನೀವು, “ಫಲವನ್ನು ಕೊಡು” ವವರಲ್ಲಿ ಒಬ್ಬರಾಗಿರಬಲ್ಲಿರಿ.—ಮತ್ತಾ. 13:23.