ಬ್ರೋಷರ್ಗಳನ್ನು ಉಪಯೋಗಿಸುತ್ತಾ—ದೇವರ ವಾಕ್ಯದ ಶಿಕ್ಷಕರಾಗಿರ್ರಿ
1 ಯೆಹೋವನ ಪ್ರತಿಯೊಬ್ಬ ಸಮರ್ಪಿತ ಸೇವಕನಿಗೆ ದೇವರ ವಾಕ್ಯವನ್ನು ಇತರರಿಗೆ ಕಲಿಸುವ ಕೆಲಸದಲ್ಲಿ ಪಾಲನ್ನು ತೆಗೆದುಕೊಳ್ಳುವ ಒಂದು ಜವಾಬ್ದಾರಿಯಿದೆ. ನಮಗೆ ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿ . . . ಅವರಿಗೆ ಉಪದೇಶ ಮಾಡುವ’ ನಿಯೋಗವನ್ನು, ಸ್ವರ್ಗ ಮತ್ತು ಭೂಮಿಯಲ್ಲಿ ಎಲ್ಲಾ ಅಧಿಕಾರವಿರುವವನು ಕೊಟ್ಟಿದ್ದಾನೆಂಬುದನ್ನು ನಾವು ಗಣ್ಯಮಾಡುವಾಗ ಈ ಜವಾಬ್ದಾರಿಯ ಗಾಂಭೀರ್ಯವು ಸ್ಪಷ್ಟವಾಗಿಗುತ್ತದೆ. (ಮತ್ತಾ. 28:18-20) ಆದುದರಿಂದ, ಸುವಾರ್ತೆಯನ್ನು ಸಾರುವದರಲ್ಲಿ ಪಾಲಿಗರಾಗುವುದು, ನಾವು ಶಿಕ್ಷಕರಾಗುವದನ್ನು ಅವಶ್ಯಪಡಿಸುತ್ತದೆ.—2 ತಿಮೊ. 2:2.
2 ಆಗಸ್ಟ್ ತಿಂಗಳಿನಲ್ಲಿ ಬ್ರೋಷರ್ಗಳನ್ನು ನೀಡುತ್ತಿರುವಾಗ ನಾವು ನಮ್ಮ ಕಲಿಸುವ ಕೌಶಲಗಳನ್ನು ಉಪಯೋಗಿಸಬಲ್ಲೆವು. ಅವುಗಳಿಂದ ಕೆಲವು ಆಸಕ್ತಿಕರ ಶಾಸ್ತ್ರೀಯ ವಿಚಾರಗಳನ್ನು ನಾವು ಆರಿಸಿ, ಸಂಭಾಷಣೆಯೊಂದನ್ನು ಆರಂಭಿಸಲು ನಮಗೆ ಸಹಾಯ ಮಾಡುವ ಕೆಲವು ಹೇಳಿಕೆಗಳನ್ನು ತಯಾರಿಸಬಲ್ಲೆವು.
3 “ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?” ಎಂಬ ಬ್ರೋಷರನ್ನು ನೀಡುವಾಗ ನೀವು ಹೀಗನ್ನಬಲ್ಲಿರಿ:
◼ “ನಾವು ನಿಮ್ಮ ನೆರೆಯವರಲ್ಲಿ ಹೆಚ್ಚಿನವರನ್ನು ಸಂದರ್ಶಿಸಿದ್ದೇವೆ ಮತ್ತು ಅವರು ಪಾತಕ, ಭಯೋತ್ಪಾದನೆ, ಮತ್ತು ಹಿಂಸಾಚಾರದಲ್ಲಿನ ಅಕಸ್ಮಾತ್ ವೃದ್ಧಿಯ ಕುರಿತಾಗಿ ಚಿಂತಿತರಾಗಿದ್ದಾರೆಂದು ಕಂಡುಕೊಂಡೆವು. ನಿಮ್ಮ ಅಭಿಪ್ರಾಯದಲ್ಲಿ, ಇದು ಇಂತಹ ಒಂದು ಸಮಸ್ಯೆಯಾಗಿರುವದೇಕೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇದು ಸಂಭವಿಸುವುದೆಂದು ಬೈಬಲ್ ಭವಿಷ್ಯ ನುಡಿದದ್ದು ನಮಗೆ ವಿಶೇಷ ಆಸಕ್ತಿಯದ್ದಾಗಿದೆ. [2 ತಿಮೊಥೆಯ 3:1-3ನ್ನು ಓದಿ.] ಇದು ‘ಕಡೇ ದಿವಸಗಳಲ್ಲಿ’ ಸಂಭವಿಸಲಿದೆಯೆಂಬದನ್ನು ಗಮನಿಸಿರಿ. ಯಾವುದೋ ಒಂದು ವಿಷಯವು ಅಂತ್ಯವಾಗಲಿದೆಯೆಂದು ಇದು ಸೂಚಿಸುತ್ತದೆ. ಅದೇನೆಂದು ನೀವು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಪುಟ 22ಕ್ಕೆ ತಿರುಗಿಸಿರಿ, ಚಿತ್ರವನ್ನು ತೋರಿಸಿ ಆ ಪುಟದಲ್ಲಿ ಉದ್ಧರಿಸಲ್ಪಟ್ಟಿರುವ ಒಂದೆರಡು ವಚನಗಳನ್ನು ಚರ್ಚಿಸಿರಿ. ಈ ಆಶೀರ್ವಾದಗಳು ನಿಕಟವಾಗಿವೆಯೆಂದು ನಾವು ನಂಬುವುದರ ಕಾರಣವನ್ನು ವಿವರಿಸಲು ಅನಂತರ ಹಿಂದಿರುಗಿ ಬರಲು ಏರ್ಪಾಡುಗಳನ್ನು ಮಾಡಿರಿ.
4 “ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?” ಎಂಬ ಬ್ರೋಷರನ್ನು ನೀಡುವಾಗ ಈ ಪ್ರಸ್ತಾವನೆಯನ್ನು ಉಪಯೋಗಿಸಲು ನೀವು ಇಷ್ಟಪಡಬಹುದು:
◼ “ಜೀವಿಸುವುದರಲ್ಲಿ ಒಂದು ನಿಜ ಉದ್ದೇಶವನ್ನು ಕಂಡುಹಿಡಿಯಲು ಪ್ರಯತ್ನಿಸುವುದರಲ್ಲಿ ಅನೇಕ ಜನರು ಕಷ್ಟವನ್ನು ಅನುಭವಿಸುತ್ತಾರೆ. ಕೆಲವರು ತಕ್ಕಮಟ್ಟಿಗೆ ಸೀಮಿತ ಸಂತೋಷವನ್ನು ಅನುಭವಿಸುತ್ತಿರುವಾಗ, ಹೆಚ್ಚಿನವರು ನಿರಾಶೆ ಮತ್ತು ಕಷ್ಟಾನುಭವದಿಂದ ತುಂಬಿರುವ ಜೀವನಗಳನ್ನು ನಡೆಸುತ್ತಿದ್ದಾರೆ. ನಾವು ಈ ರೀತಿಯಲ್ಲಿ ಜೀವಿಸುವುದಕ್ಕಾಗಿ ದೇವರು ಉದ್ದೇಶಿಸಿದನೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾವು ಈ ರೀತಿಯ ಒಂದು ಲೋಕದಲ್ಲಿ ಜೀವಿಸಬೇಕೆಂದು ದೇವರು ಬಯಸುತ್ತಾನೆಂದು ಬೈಬಲ್ ತೋರಿಸುತ್ತದೆ.” ಪುಟ 21 ರಲ್ಲಿರುವ ಚಿತ್ರವನ್ನು ತೋರಿಸಿರಿ, ಮತ್ತು ಅನಂತರ ಪುಟ 25 ಮತ್ತು 26ರ, 4-6ನೆಯ ಪ್ಯಾರಗ್ರಾಫ್ಗಳಿಗೆ ತಿರುಗಿಸಿರಿ, ಮತ್ತು ಅವನೇನನ್ನು ವಾಗ್ದಾನಿಸಿದ್ದಾನೆಂದು ವಿವರಿಸಿರಿ. ನೀವು ಹಿಂದಿರುಗಿದಾಗ ಚರ್ಚಿಸಲಿಕ್ಕಾಗಿ ಈ ಪ್ರಶ್ನೆಯನ್ನು ಎಬ್ಬಿಸಿರಿ: “ದೇವರು ತನ್ನ ವಾಗ್ದಾನಗಳನ್ನು ಪೂರೈಸುವನೆಂದು ನಾವು ಹೇಗೆ ನಿಶ್ಚಿತರಾಗಿರಸಾಧ್ಯವಿದೆ?”
5 “ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!” ಬ್ರೋಷರನ್ನು, ಮುಂದಿನ ಮತ್ತು ಹಿಂದಿನ ಆವರಣದಲ್ಲಿರುವ ಇಡೀ ಚಿತ್ರವನ್ನು ಪ್ರದರ್ಶಿಸುತ್ತಾ, ಹೀಗೆ ಕೇಳುವ ಮೂಲಕ ನೀಡಬಹುದು:
◼ “ಈ ರೀತಿಯ ಸಂತೋಷಿತ ಜನರಿಂದ ತುಂಬಿರುವ ಒಂದು ಲೋಕದಲ್ಲಿ ಜೀವಿಸಲು ನೀವು ಇಷ್ಟಪಡುವಿರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರು ಜನರನ್ನು ಪ್ರೀತಿಸುತ್ತಾನೆ ಮತ್ತು ಅವರು ಈ ಭೂಮಿಯ ಮೇಲೆ ಸಂತೋಷದಲ್ಲಿ ಸದಾಕಾಲ ಜೀವಿಸುವಂತೆ ಬಯಸುತ್ತಾನೆಂದು ಬೈಬಲ್ ನಮಗೆ ಹೇಳುತ್ತದೆ.” ಚಿತ್ರ ನಂಬ್ರ 49ಕ್ಕೆ ತಿರುಗಿಸಿರಿ, ಮತ್ತು ಉಲ್ಲೇಖಿಸಲ್ಪಟ್ಟಿರುವ ಶಾಸ್ತ್ರವಚನಗಳಲ್ಲಿ ಒಂದನ್ನು ಓದಿರಿ. ಅನಂತರ, ಚಿತ್ರ ನಂಬ್ರ 50ನ್ನು ತೋರಿಸಿರಿ, ಮತ್ತು ನಾವು ಈ ಪ್ರಮೋದವನದಲ್ಲಿ ಜೀವಿಸಲು ಬಯಸುವುದಾದರೆ ನಾವೇನು ಮಾಡತಕ್ಕದ್ದೆಂದು ವಿವರಿಸಿರಿ. ಹಿಂದಿರುಗಿ ಬಂದು, ಯೇಸು ಕ್ರಿಸ್ತನಲ್ಲಿ ನಂಬಿಕೆ ಏಕೆ ಇಷ್ಟು ಪ್ರಾಮುಖ್ಯವೆಂದು ಚರ್ಚಿಸಲು ಸಿದ್ಧರಿದ್ದೀರೆಂದು ಹೇಳಿರಿ.
6 ನಾವು ‘ನಮ್ಮ ಕಲಿಸುವಿಕೆಗೆ ಗಮನಕೊಡುವ ಮೂಲಕ ನಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧ’ ಮಾಡುವಾಗ ಯೆಹೋವನು ಪ್ರಸನ್ನನಾಗುತ್ತಾನೆ. (1 ತಿಮೊ. 4:15, 16, NW) “ಹೆಚ್ಚು ಉತ್ತಮವಾದ ಯಾವುದೋ ವಿಷಯದ ಕುರಿತಾದ ಸುವಾರ್ತೆ” ಯನ್ನು ಕೇಳಲು ಹಾತೊರೆಯುವವರಿಗೆ ನೆರವು ನೀಡುವ ನಮ್ಮ ಪ್ರಯತ್ನಗಳಲ್ಲಿ ನಮ್ಮ ಬ್ರೋಷರ್ಗಳು ನಮಗೆ ಒಂದು ನಿಜ ಸಹಾಯಕವಾಗಿರಸಾಧ್ಯವಿದೆ.—ಯೆಶಾ. 52:7, NW.