-
1 ಅರಸು 8:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಯೆಹೋವನೇ, ಇಸ್ರಾಯೇಲ್ ದೇವರೇ, ನೀನು ನಿನ್ನ ಸೇವಕನಾದ ನನ್ನ ಅಪ್ಪ ದಾವೀದನಿಗೆ ‘ನಿನ್ನ ತರಾನೇ ನಿನ್ನ ಮಕ್ಕಳೂ ನಾನು ಹೇಳಿದ ದಾರಿಯಲ್ಲಿ ನಡೆದ್ರೆ, ಅವರು ನಡ್ಕೊಳ್ಳೋ ರೀತಿ ಬಗ್ಗೆ ಜಾಗ್ರತೆಯಿಂದ ಇದ್ರೆ, ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ನಿನ್ನ ವಂಶದವ್ರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ’ ಅಂತ ಮಾತು ಕೊಟ್ಟಿದ್ದೆ. ಈಗ ಆ ಮಾತನ್ನ ನಿಜ ಮಾಡು.+
-
-
ಕೀರ್ತನೆ 89:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನೀನು ಹೀಗೆ ಹೇಳಿದೆ “ನಾನು ಆರಿಸ್ಕೊಂಡ ನನ್ನ ಸೇವಕ ದಾವೀದನ ಜೊತೆ ನಾನು ಒಂದು ಒಪ್ಪಂದ ಮಾಡ್ಕೊಂಡೆ.+
-
-
ಯೆರೆಮೀಯ 33:20, 21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 “ಯೆಹೋವ ಏನು ಹೇಳ್ತಾನಂದ್ರೆ ‘ಸರಿಯಾದ ಸಮಯಕ್ಕೆ ಹಗಲು, ರಾತ್ರಿ ಆಗಬೇಕಂತ ನಾನು ಮಾಡ್ಕೊಂಡಿರೋ ಒಪ್ಪಂದವನ್ನ ನೀವು ಮುರಿದುಹಾಕೋಕೆ ಹೇಗೆ ಆಗಲ್ವೋ+ 21 ಅದೇ ತರ ನನ್ನ ಸೇವಕನಾದ ದಾವೀದನ ಸಿಂಹಾಸನದ ಮೇಲೆ ಅವನ ಮಗ ಕೂತು ರಾಜನಾಗಿ ಆಳ್ತಾನೆ+ ಅಂತ ನಾನು ಅವನ ಜೊತೆ ಮಾಡ್ಕೊಂಡಿರೋ ಒಪ್ಪಂದ ಮುರಿದುಹೋಗೋಕೆ ಸಾಧ್ಯನೇ ಇಲ್ಲ.+ ಅಲ್ಲದೆ ನನ್ನ ಸೇವಕರಾಗಿರೋ ಲೇವಿಯರಾದ ಪುರೋಹಿತರ ಜೊತೆ ನಾನು ಮಾಡ್ಕೊಂಡಿರೋ ಒಪ್ಪಂದ ಸಹ ಮುರಿದುಹೋಗಲ್ಲ.+
-